Breaking News

49 ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್


ಸ್ಯಾಂಡಲ್​ವುಡ್​ ಬಾದ್​ಷಾ ಅಂದರೆ ಯಾರಿಗೆ ಇಷ್ಟ ಇಲ್ಲ. ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್ ಅಂದರೆ ನೂರು ರೂಪಾಯಿ ನೋಟು ನೋಡಿದ ಹಾಗೇ ಇರುತ್ತೆ. ಯಾಕೆ ಗೊತ್ತಾ? 100 ರೂಪಾಯಿ ನೋಟಿನಲ್ಲಿ ಎಲ್ಲಾ ಭಾಷೆ ಇರುವ ಹಾಗೆ, ಕಿಚ್ಚನ ನೋಡಿದರೆ ಪರಿಪೂರ್ಣ ನಟ ಎಂದರೆ ಅತಿಶೋಕ್ತಿಯಲ್ಲ.

ಹೀರೋ , ವಿಲನ್ ​, ಸಪೋರ್ಟಿಂಗ್​ ಕ್ಯಾರಕ್ಟರ್​, ಗೆಸ್ಟ್​ ಕ್ಯಾರೆಕ್ಟರ್​ ಹೀಗೆ ಕಿಚ್ಚ ಮಾಡದೇ ಇರುವ ಪಾತ್ರವೇ ಇಲ್ಲ ಅನ್ನಬಹುದು. ಇಂಥಹ ನಟನಿಗೆ ಇಂದು ಜನ್ಮದಿನ ದ ಸಂಭ್ರಮ. ಸುದೀಪ್ ಅವರ ಇಂಡಸ್ಟ್ರಿ ಸ್ನೇಹಿತರು, ಆಪ್ತರು ಸಹ ಬಾದ್‌ಶಾ ಬರ್ತಡೇಗೆ ಪ್ರೀತಿಯಿಂದ ಶುಭಕೋರಿದ್ದಾರೆ. ಗುಣದಲ್ಲಿ ಮಾಣಿಕ್ಯ, ಅಭಿನಯದಲ್ಲಿ ಚಕ್ರವರ್ತಿ, ಅಭಿಮಾನಿಗಳ ಬಾದ್​ಷಾ, ಕಿಚ್ಚ ಸುದೀಪ್ ಅವರು ಇಂದು 49ನೇ ವಸಂತಕ್ಕೆ ಸುದೀಪ್​ ಕಾಲಿಟ್ಟಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕಿಚ್ಚ ಸುದೀಪ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಕೊರೋನಾ ಕಾರಣದಿಂದ ಮನೆ ಬಳಿ ಬರಬೇಡಿ ಎಂದು ಕಿಚ್ಚ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದರೆ, ಈ ಬಾರಿ ಕಿಚ್ಚನ ಬರ್ತ್​ಡೇ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ತಡರಾತ್ರಿಯಿಂದಲೇ ಜೆಪಿ ನಗರದ ಕಿಚ್ಚನ ನಿವಾಸದ ಎದುರು ಅಭಿಮಾನಿಗಳು ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ಕೇಕ್​ ತಂದಿದ್ದರು.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *