Breaking News

ಲಾರಿ ಮೂರು ಎತ್ತಿನಗಾಡಿಗಳಿಗೆ ಡಿಕ್ಕಿ : ಐದು ಎತ್ತುಗಳು ಸಾವು



ಮಂಡ್ಯ : ಜಿಲ್ಲೆಯ ಪಾಂಡವಪುರ ತಾಲೂಕಿನ ಮಹದೇವಪುರದಲ್ಲಿ ರಾತ್ರಿ ಲಾರಿಯೊಂದು ಮೂರು ಎತ್ತಿನಗಾಡಿಗಳಿಗೆ ಡಿಕ್ಕಿ ಹೊಡೆದಿದ್ದು, ಅಪಘಾತ ಸಂಭವಿಸಿದೆ.

ನಾಗಮಂಗಲ ಕಡೆಯಿಂದ ಶ್ರೀರಂಗಪಟ್ಟಣ ಕಡೆಗೆ ತರಕಾರಿ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಪಾಂಡವಪುರದ ಮಹದೇವಪುರದಲ್ಲಿ ಮೂರು ಎತ್ತಿನಗಾಡಿಗಳಿಗೆ ಡಿಕ್ಕಿ ಹೊಡೆದಿದ್ದು, ಐದು ಎತ್ತುಗಳು ಸ್ಥಳದಲ್ಲೇ ಸಾವಿಗೀಡಾಗಿವೆ. ಮತ್ತೊಂದೆಡೆ ಮೂವರು ರೈತರು ಮತ್ತು ಒಂದು ಎತ್ತಿಗೆ ಗಾಯಗಳಾಗಿವೆ. ಅಪಘಾತ ವಾಗುತ್ತಿದ್ದಂತೆ ತಕ್ಷಣವೇ ಲಾರಿ ಚಾಲಕ ಪರಾರಿಯಾಗಿದ್ದಾನೆ.ಈ ಪ್ರಕರಣ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *