Breaking News

ಮುರುಘಾಮಠದ ಶ್ರೀಗೆ ಏದುರಾದ ಮತ್ತೊಂದು ಸಂಕಷ್ಟ


ಬೆಂಗಳೂರು : ಪೋಕ್ಸೋ ಕಾಯ್ದೆಯಡಿ ಮುರುಘಾಮಠದ ಶಿವಮೂರ್ತಿ ಸ್ವಾಮೀಜಿಗಳ ಬಂಧನವಾಗಿದ್ದು, ಇದೀಗ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬೆಂಗಳೂರು ಮೆಟ್ರೊಪಾಲಿಟನ್​ ಮ್ಯಾಜಿಸ್ಟ್ರೇಟ್ ಕೋರ್ಟ್​ನಿಂದ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ.​​

ಮುರುಘಾ ಶ್ರೀಗಳ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ತಿಪ್ಪಶೆಟ್ಟಿ ಮಠಕ್ಕೆ ಸೇರಿದ ಕೆಂಗೇರಿ ಸೂಲಿಕೆರೆಯ 8 ಕೋಟಿ ಮೌಲ್ಯದ ಮಠದ ಆಸ್ತಿ 49 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದೆ ಮುರುಘಾಶ್ರೀಗಳ ವಿರುದ್ಧ ಪಿ.ಎಸ್.ಪ್ರಕಾಶ್ ಎಂಬುವರ ಖಾಸಗಿ ದೂರು ನೀಡಿದ್ದಾರೆ.

ಶ್ರೀಗಳ ವಿರುದ್ಧ ಜಮೀನು ಅಕ್ರಮ ಮಾರಾಟ, ವಂಚನೆ, ವಿಶ್ವಾಸದ್ರೋಹ ಆರೋಪ ಮಾಡಿದ್ದು, ಮುರುಘಾ ಶರಣರ ವಿರುದ್ಧ 2013ರಲ್ಲಿ ಖಾಸಗಿ ದೂರು ದಾಖಲಾಗಿತ್ತು. ಸಮನ್ಸ್ ನೀಡಿದರೂ ಕೋರ್ಟ್​ಗೆ ಹಾಜರಾಗದ ಹಿನ್ನೆಲೆಯಲ್ಲಿ ಮುರುಘಾ ಶರಣರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಲಾಗಿತ್ತು. ಹೀಗಾಗಿ ಮುರುಘಾ ಮಠದ ಸ್ವಾಮೀಜಿ ಮತ್ತೊಂದು ಸಂಕಷ್ಟ ಎದುರಾಗಿದ್ದು, ಬೆಂಗಳೂರು ಮೆಟ್ರೊಪಾಲಿಟನ್​ ಮ್ಯಾಜಿಸ್ಟ್ರೇಟ್ ಕೋರ್ಟ್​ನಿಂದ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ.​​

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *