Breaking News

ಕಿವಿ ಮೇಲೆ ಹೂವಿಟ್ಟ ಬಜೆಟ್, ಸುಳ್ಳಿನ ಸರಮಾಲೆಯ ಬಜೆಟ್: ಸುರ್ಜೆವಾಲಾ ವ್ಯಂಗ್ಯ…

ಹುಬ್ಬಳ್ಳಿ: ಬಜೆಟ್ ಅಂದರೆ ಕಿವಿ ಮೇಲೆ ಹೂವು. ಬಿಜೆಪಿಯವರು ಸುಳ್ಳನ್ನೇ ವ್ಯವಸ್ಥಿತವಾಗಿ ಹೇಳುತ್ತಾರೆ. ಸಿಎಂ ಬಂಜೆಟ್ ಮಂಡನೆ ಸುಳ್ಳು ಕಂತೆಯಾಗಿದೆ. ಬಜೆಟ್ ಸುಳ್ಳು.. ಸುಳ್ಳು.. ಸುಳ್ಳು… ಪ್ರಧಾನಿ ಮೋದಿ ಅವರಿಂದ ಬೊಮ್ಮಾಯಿ ಸುಳ್ಳು ಹೇಳುವುದನ್ನು ಚೆನ್ನಾಗಿ ಕಲಿತಿದ್ದಾರೆ. ಸುಳ್ಳನ್ನೇ ವ್ಯವಸ್ಥಿತವಾಗಿ ಹೇಳಿದ್ದಾರೆ. ಆದರೇ ನಕಲು ಮಾಡಲು ಕೂಡ ಅಕ್ಕಲು ಬೇಕು ಆದರೆ ಬಿಜೆಪಿಯವರು ಕಳ್ಳಬೇಕ್ಕಿನಂತೆ ಕಾಂಗ್ರೆಸ್ ಯೋಜನೆ ಕಾಪಿ ಮಾಡಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಳೆದ ಬಜೆಟ್ ನಲ್ಲಿ ಕೊಟ್ಟ ಭರವಸೆ ಕಥೆ ಏನಾಯ್ತು. 240 ಭರವಸೆ ಹಣಕಾಸು ಇಲಾಖೆ ಹಂತದಲ್ಲಿವೆ. 132 ಭರವಸೆಗಳನ್ನು ಟಚ್ ಮಾಡಿಯೇ ಇಲ್ಲ. ಕಳೆದ ಬಜೆಟ್ ಎರಡೂವರೆ ಲಕ್ಷದ ಬಜೆಟ್ ಮಂಡನೆಯಾಗಿತ್ತು. ಶೇ 45 ರಷ್ಟು ಬಜೆಟ್ ಸಹ ಖರ್ಚು ಮಾಡಿಲ್ಲ. ಕರ್ನಾಟಕದ ಜನರ ಕಲ್ಯಾಣವಾಗಿಲ್ಲ. ನಮ್ಮ ಕ್ಲಿನಿಕ್ ಎಲ್ಲಿ ಹೋದವು.

ಯುವತಿಯರಿಗೆ ಶುಚಿ ಸ್ಕೀಂ ಆರಂಭಿಸೋದನ್ನೇ ಮರೆತು ಹೋದರು ಎಂದರು.ಒಕ್ಕಲಿಗ ಅಭಿವೃದ್ಧಿ ನಿಗಮ ಸೇರಿ ಏನನ್ನೂ ಮಾಡಿಲ್ಲ.ನಾಗಮೋಹನ ದಾಸ್ ಸಮಿತಿ ವರದಿ ಬಗ್ಗೆ ಕ್ರಮ ಕೈಗೊಂಡಿಲ್ಲ. ಎಸ್.ಸಿ., ಎಸ್.ಟಿ. ಮೀಸಲಾತಿ ಹೆಚ್ಚಳವನ್ನು 9 ನೇ ಶೆಡ್ಯೂಲ್ ನಲ್ಲಿ ಸೇರಿಸಿಲ್ಲ. ಒಕ್ಕಲಿಗ, ಲಿಂಗಾಯಿತರಿಗೆ ವಿಶೇಷ ಮೀಸಲಾತಿ ನೀಡೋದಾಗಿ ಹೇಳಿದ್ದರು.‌ ಆದರೆ ಸದ್ದಿಲ್ಲದೆ ಸ್ಟೇ ಬರುವಂತೆ ನೋಡಿಕೊಂಡರು.‌ ಡಬಲ್, ತ್ರಿಪಲ್ ಎಂಜಿನ್ ಸರ್ಕಾರವಿದ್ದರೂ ಪ್ರಯೋಜನವಿಲ್ಲ. ಬಸವರಾಜ ಬೊಮ್ಮಾಯಿ‌ ಭ್ರಷ್ಟಾಸುರ ಬೊಮ್ಮಾಯಿ.‌ ಡ್ಯೂಪ್ ಡಿಸೀವೈ ಡಿವೈಡ್ ಮಾಡ್ತಿದೆ. ಇದೊಂದು ಬ್ಯಾಡ್, ಬ್ರೋಕನ್ ಸರ್ಕಾರ ಎಂದು ಲೇವಡಿ ಮಾಡಿದರು.

Share News

About Shaikh BigTv

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *