Breaking News

ಅರವಿಂದ ಲಿಂಬಾವಳಿ ಜೊತೆ ಮಾತನಾಡುತ್ತೇನೆ : ಸಿಎಂ


ಹುಬ್ಬಳ್ಳಿ : ಅರವಿಂದ ಲಿಂಬಾವಳಿ ಮಹಿಳೆಯ ಮೇಲೆ ದರ್ಪ ಪ್ರಕರಣ‌ ಕುರಿತಂತೆ ಅವರ ಜೊತೆ ನಾನು ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ನಾನೂ ಊರಲ್ಲಿ ಇರಲಿಲ್ಲ, ಈ ಕುರಿತು ಅರವಿಂದ ಲಿಂಬಾವಳಿಯವರ ಜೊತೆಗೆ ಚರ್ಚೆ ಮಾಡುತ್ತೇನೆ ಎಂದರು. ಸಿಇಟಿ 50-50 ಜಾರಿಗೆ ತರುವ ಮುನ್ನ ಸರಿಯಾಗಿ ಅಧ್ಯಯನ ಮಾಡುತ್ತೇವೆ. ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೆವೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಬಿಕ್ಕಟ್ಟು ವಿಚಾರಕ್ಕೆ ಪ್ರತಿಕ್ರಿಯಿಸಿ . ನವೆಂಬರ್ 23 ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಅದಕ್ಕಾಗಿ ಪ್ರಭಾವಿ ಹಾಗೂ ನುರಿತ ಕಾನೂನು ತಜ್ಞರನ್ನ ನೇಮಕ‌ ಮಾಡುವಂತೆ ಅಡ್ವೋಕೆಟ್ ಜನರಲ್ ಅವರಿಗೆ ಸೂಚಿಸಿದ್ದೆನೆ. ರಾಜ್ಯ ಸರ್ಕಾರ ಸುಪ್ರೀಂ‌ ಕೋರ್ಟ್ ನಲ್ಲಿ ಸಮರ್ಥವಾದ ಮಂಡಿಸಲು ಸಜ್ಜಾಗಿದೆ ಎಂದರು.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *