Breaking News

ವಾಹನ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ : ಚಾಲಕ ಮೃತ್ಯು

ರಾಯಚೂರು : ರಾಯಚೂರು ತಾಲೂಕಿನ ಗಾರಲದಿನ್ನಿ ಸಮೀಪ ಹತ್ತಿ ತುಂಬಿಕೊಂಡು ಮಾರಾಟಕ್ಕೆ ತೆರಳುತ್ತಿದ್ದ ಪಿಕ್‌ಅಪ್ ವಾಹನದ ಚಾಲಕನಿಗೆ ಹೃದಯಾಘಾತ ಸಂಭವಿಸಿದ ಪರಿಣಾಮ ವಾಹನ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ನಡೆದಿದೆ.ಮೃತ ಚಾಲಕನನ್ನು ನರಸಿಂಹ (33) ಎಂದು ಗುರುತಿಸಲಾಗಿದೆ.ಬೆಳಿಗ್ಗೆ ಹತ್ತಿ ತುಂಬಿಕೊಂಡು ರಾಯಚೂರು ಮಾರುಕಟ್ಟೆ ಕಡೆ ತೆರಳುತ್ತಿದ್ದ ವೇಳೆ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದ್ದು, ನಿಯಂತ್ರಣ ತಪ್ಪಿದ ವಾಹನ ಪಕ್ಕದ ಜಮೀನಿಗೆ ಪಲ್ಟಿಯಾಗಿದೆ.ಚಾಲಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಾಹನದಲ್ಲಿ ತುಂಬಿದ್ದ ಹತ್ತಿ ಹೊಲದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದೆ.

Share News

About BigTv News

Check Also

ವಿದ್ಯುತ್ ಸಂಪರ್ಕ ಪರಿಶೀಲನೆಗೆ ತೆರಳಿದ್ದ ಮೆಸ್ಕಾಂ ಎಇಇ ಮೇಲೆ ಹಲ್ಲೆಗೆ ಯತ್ನ; ದೂರು ದಾಖಲು

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಾಳುಗೋಡು ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸ್ಥಳ ಪರಿಶೀಲನೆಗೆ ತೆರಳಿದ್ದ ಮೆಸ್ಕಾಂ ಎಇಇ ಮೇಲೆ …

Leave a Reply

Your email address will not be published. Required fields are marked *