Breaking News

ಅಂತರರಾಷ್ಟ್ರೀಯ ಮಟ್ಟದ ಏಮ್ಸ್ ರಾಯಚೂರಿನಲ್ಲಿ ಸ್ಥಾಪಿಸುವುದು ಸೂಕ್ತವಾಗಿದೆ : ಫಾದರ್ ಪೌಲರಾಜ್


ರಾಯಚೂರು: ಜಿಲ್ಲೆಯು ಸರ್ವ ರಂಗದಲ್ಲಿಯೂ ಅತ್ಯಂತ ಹಿಂದುಳಿದಿದೆ. ವಿಶೇಷವಾಗಿ ಆರೋಗ್ಯ ಕ್ಷೇತ್ರದ ಸೌಲಭ್ಯಗಳು ಅತ್ಯಂತ ಕೆಳಮಟ್ಟದಲ್ಲಿವೆ. ಅದಕ್ಕಾಗಿಯೇ ಅಂತರರಾಷ್ಟ್ರೀಯ ಮಟ್ಟದ ಏಮ್ಸ್ ರಾಯಚೂರಿನಲ್ಲಿ ಸ್ಥಾಪಿಸುವುದು ಸೂಕ್ತವಾಗಿದೆ ಎಂದು ಇನ್ಫೆಂಟ್ ಜೀಸಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಫಾದರ್ ಪೌಲರಾಜ್ ಹೇಳಿದರು.

ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಏಮ್ಸ್‌ ಹೋರಾಟ ಸಮಿತಿಯು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಬುಧವಾರ 125ನೇ ದಿನಕ್ಕೆ ಕಾಲಿರಿಸಿದ್ದು, ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಪ್ರದೇಶವು ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜನರ ಆರೋಗ್ಯ ಮತ್ತು ಪ್ರಾಣ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಕೂಡಲೇ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆ ಮಾಡಲೇಬೇಕು ಎಂದು ಒತ್ತಾಯಿಸಿದರು.

ಧರ್ಮಗುರುಗಳಾದ ರೇ. ಸಂಪತಕುಮಾರ್ ರೇ. ವರಪ್ರಸಾದ್ ರೇ. ಅನ್ನೋ ಕ್ರಾಶ್ ರೆ. ಜಾನ್ ವೆಸ್ಲಿ ರೇ. ಡೆವಿಡ್ ರೇ. ಸಿ.ಪ್ರಭಾಕರ್, ರೇ .ಎಂ.ಅನೇಕ‍ ರೇ ಜಾಶ್ವ ಗಡ್ಡಂ , ರೇ..ವಿಲ್ಸನ್ ,ರೇ ಮಾರ್ಟಿನ್ ,ರೇ ಸುಂದರರಾಜ್, ರೇ. ಲೂಕ್ ,ರೇ. ರಾಜೇಶ್, ರೇ. ವಿಲ್ಸನ್ ರವಿ , ರೇ. ಡಿ. ಜೇಮ್ಸ್’ ರೇ. ವಿ.ಡೇನಿಯಲ್ ರೇ. ಜಾಶವರಾಜ್, ರೇ.ಮ್ಯಾಥ್ಯೂ ,ರೇ. ಜೇ.ರಾಜ್ ರೇ. ದೇವದಾಸ್ ರೈ .ನವೀನ್ ಕುಮಾರ್ ಮತ್ತಿತರರು ಇದ್ದರು.

Share News

About BigTv News

Check Also

ರೀಲ್ಸ್ ಲೋಕದ ಚೆಲುವೆ ಶವವಾಗಿ ಪತ್ತೆ : ಅತ್ತ ಗಂಡ ವಶಕ್ಕೆ, ಇತ್ತ ಕಂದನ ಆಕ್ರಂದನ.. ಏನಾಯ್ತು..?

ತುಮಕೂರು: ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ 24 ವರ್ಷದ ಸುಷ್ಮಿತಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಎರಡೂವರೆ …

Leave a Reply

Your email address will not be published. Required fields are marked *