ಬೆಂಗಳೂರು : ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ನಡೆದ ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಗ್ದಾಳಿ ಮುಂದುವರಿದಿದೆ. ವಿಮ್ಸ್ ಆಸ್ಪತ್ರೆಯಲ್ಲಾದ ಅವಘಡಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರೇ ಹೊಣೆ ಹೊರಬೇಕು ಎಂದು ಕಾಂಗ್ರೆಸ್ ನಾಯಕರು ಹೇಳ್ತಿದ್ದಾರೆ.
ಇನ್ನು ಇದಕ್ಕೆ ಪ್ರತಿಕ್ರಿಯಿಸಿ ಸಚಿವ ಸುಧಾಕರ್, ನಾಯಕರಾದವರು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ರು.
ಟ್ವೀಟ್ ಮೂಲಕ ಕಿಡಿಕಾರಿದ ಕಾಂಗ್ರೆಸ್
ಟ್ವೀಟ್ ಮೂಲಕ ಕಿಡಿಕಾರಿದ ಕಾಂಗ್ರೆಸ್, ವಿದ್ಯುತ್ ಕೊರತೆಯಿಂದ ಅವಘಡ ನಡೆದಿಲ್ಲ ಎಂದಾದರೆ ತನಿಖೆಗೆ ಸಮಿತಿ ರಚಿಸಿದ್ದೇಕೆ? ಸರ್ಕಾರ ಸುಳ್ಳು ಹೇಳಿ ರಾಜ್ಯದ ದಿಕ್ಕು ತಪ್ಪಿಸುತ್ತಿದೆ. ರಾಜ್ಯದ ಜನರ ಪ್ರಾಣ ಉಳಿಯಬೇಕು ಎಂದರೆ ಅಸಮರ್ಥ ಸಚಿವ @mla_sudhakar ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದೆ.
ವಿಮ್ಸ್ ಆಸ್ಪತ್ರೆಯಲ್ಲಾದ ಸಾವುಗಳಿಗೆ ಸಿಎಂ ಹಾಗೂ ಆರೋಗ್ಯ ಸಚಿವರು ಹೊಣೆ ಹೊರಬೇಕು.
ವಿದ್ಯುತ್ ಕೊರತೆಯಿಂದ ಅವಘಡ ನಡೆದಿಲ್ಲ ಎಂದಾದರೆ ತನಿಖೆಗೆ ಸಮಿತಿ ರಚಿಸಿದ್ದೇಕೆ? ಸುಳ್ಳು ಹೇಳಿ ರಾಜ್ಯದ ದಿಕ್ಕು ತಪ್ಪಿಸುತ್ತಿದೆ ಸರ್ಕಾರ ರಾಜ್ಯದ ಜನರ ಪ್ರಾಣ ಉಳಿಯಬೇಕು ಎಂದರೆ ಅಸಮರ್ಥ ಸಚಿವ @mla_sudhakar ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.
bigtvnews | Hubli Dharwad News | Kannada News | Karnataka News Hubli News | News In Hubli | Local news

