Breaking News

ಯೂಟ್ಯೂಬ್​ನಲ್ಲಿ ಹೊಸ ಟ್ರೆಂಡ್​ ಸೃಷ್ಟಿಸಿರುವ ಕಬ್ಜ ಚಿತ್ರದ ಟೀಸರ್​​


ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ ಚಿತ್ರ ಕಬ್ಜದ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಮೆಚ್ಚುಗೆ ಗಳಿಸುತ್ತಿದೆ. ಬಿಗ್​ ಬಜೆಟ್​​ನಲ್ಲಿ ನಿರ್ಮಾಣಗೊಳ್ಳುತ್ತಿರುವ ಕಬ್ಜ ಚಿತ್ರದ ಟೀಸರ್​​ ರಿಲೀಸ್​ ಆಗಿದ್ದು, ಭಾರಿ ಪ್ರಶಂಸೆ ವ್ಯಕ್ತವಾಗ್ತಿದೆ.

ಉಪೇಂದ್ರ ಅಭಿಮಾನಿಗಳೂ ಸೇರಿದಂತೆ ಸಿನಿಪ್ರಿಯರು ವಿಭಿನ್ನ ಟೀಸರ್​​ಗೆ ಮನಸೋತಿದ್ದಾರೆ. ಸೆಪ್ಟೆಂಬರ್​​ 17ರಂದು ರಿಲೀಸ್​ ಆಗಿರುವ ಟೀಸರ್​ ಈಗಾಗಲೇ ಒಂದೂವರೆ ಕೋಟಿಗೂ ಹೆಚ್ಚು ವೀಕ್ಷಣೆ ಗಳಿಸಿದೆ. ಪರಭಾಷೆಯಲ್ಲೂ ಚಿತ್ರಕ್ಕೆ ಜನಪ್ರಿಯತೆ ಗಳಿಸುತ್ತಿದೆ.

ಯೂಟ್ಯೂಬ್​ನಲ್ಲಿ ಹೊಸ ಟ್ರೆಂಡ್​ ಸೃಷ್ಟಿಸಿರುವ ಟೀಸರ್​​ಗೆ ಚಿತ್ರ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಸೂಪರ್ ಅಂದಿದ್ದಾರೆ. ಕೇವಲ 24 ಗಂಟೆಗಳಲ್ಲಿ ಕಬ್ಜ ಟೀಸರ್​​ 1 ಕೋಟಿ 21 ಲಕ್ಷ ವೀಕ್ಷಣೆ ಕಂಡಿದೆ. ಮುಂದಿನ ಪ್ಯಾನ್​ ಇಂಡಿಯಾ ಚಿತ್ರಕ್ಕೆ ಸ್ವಾಗತ ಎಂದಿದ್ದು, ನಿರ್ದೇಶಕ ಆರ್​ ಚಂದ್ರು, ಉಪೇಂದ್ರ ಹಾಗೂ ಕಿಚ್ಚ ಸುದೀಪ್​ ಅವರಿಗೆ ಆಲ್​​ ದಿ ಬೆಸ್ಟ್​ ಎಂದು ಆರ್‌ಜಿವಿ ಹೇಳಿದ್ದಾರೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *