Breaking News

ಜಿಮ್ ಗಳಲ್ಲಿ ಪ್ರೋಟೀನ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ : ಸುಧಾಕರ್


ಬೆಂಗಳೂರು : ರಾಜ್ಯದ ಕೆಲ ಜಿಮ್ ಗಳಲ್ಲಿ ಪ್ರೋಟೀನ್ ಪೌಡರ್ ಮಾರಾಟ ಮಾಡಲಾಗುತ್ತಿದ್ದು, ಪ್ರೋಟೀನ್ ಪೌಡರ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯದ ಹಲವು ಜಿಮ್​ನಲ್ಲಿ ಬಳಸುವ ಪ್ರೋಟೀನ್​ ಪೌಡರ್ ಅನ್ನು ಬ್ಯಾನ್‌ ಮಾಡುವಂತೆ ಸದನದಲ್ಲಿ ಒತ್ತಾಯ ಮಾಡಲಾಗಿದೆ. ಈ ಬಗ್ಗೆ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್​ ರೆಡ್ಡಿ ಜಿಮ್​ಗಳಲ್ಲಿ ಬಳಕೆ ಮಾಡುವ ಪ್ರೋಟೀನ್ ಪೌಡರ್‌ಗಳ ಬಗ್ಗೆ ಸದನದ ಗಮನ ಸೆಳೆದು ತಮ್ಮ ಸಂತೋಷ್ ಎಂಬ ಯುವಕನು ಪ್ರೋಟೀನ್​ ಪೌಡರ್ ಸೇವನೆ ಮಾಡಿದ ಪರಿಣಾಮಗಳನ್ನು ತಿಳಿಸಿದರು.

ಇದೇ ವೇಳೆ ಪ್ರೋಟೀನ್ ಪೌಡರ್ ಮಾರಾಟದ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಕೆ ಸುಧಾಕರ್ ತಿಳಿಸಿದರು. ಪ್ರೋಟೀನ್ ಪೌಡರ್ ಬಗ್ಗೆ ಆಗುವ ಪರಿಣಾಮದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ನಿಗ್ರಹ ಮಾಡಬೇಕು ಅಂತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸರ್ಕಾರಕ್ಕೆ ಮನವಿ ಮಾಡಿದರು.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *