ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮಿಷನ್ ಕಂಪೌಂಡ ಹತ್ತಿರ ಮನೆಯೊಂದರಲ್ಲಿ ಕಳ್ಳತನವಾಗಿತ್ತು. ಕಳ್ಳರು ಒಟ್ಟು 3,20,000/- ಕಿಮ್ಮತ್ತಿನ 71 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 1,00,000/- ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.
ಆರೋಪಿಯ ಪತ್ತೆಗಾಗಿ ಪೊಲೀಸ ಆಯುಕ್ತರಾದ ಲಾಬೂರಾಮ ಹಾಗೂ ಉಪ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಲಾಗಿತ್ತು. ಆರೋಪಿತನ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸ ತಂಡ, ಆರೋಪಿ ಆದ ಬಳ್ಳಾರಿ ಮೂಲದ ಗಣೇಶ್ ಕಾಲೋನಿಯ 26 ವರ್ಷದ ಶ್ರೀಕಾಂತ ಅನ್ನೋ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿತ ಮೂರು ಪ್ರಕರಣಗಳಲ್ಲಿ ಬಾಗಿ ಆಗಿದ್ದು ಒಟ್ಟು 6,95,000/- ರೂ ಕಿಮ್ಮತ್ತಿನ 165 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 1,000/- ರೂ ಕಿಮ್ಮತ್ತಿನ 20 ಗ್ರಾಂ ತೂಕದ ಬೆಳ್ಳಿ ಆಭರಣ ಮತ್ತು 30,000/- ನಗದು ಹಣವನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರಪಡಿಸಿ ಜೈಲಿಗೆ ಅಟ್ಟಿದ್ದಾರೆ.

ಆರೋಪಿತರಿಗೆ ಪತ್ತೆ ಮಾಡಲು ಯಶಸ್ವಿಯಾದ ಉಪನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ಶ್ರೀ ರವಿಚಂದ್ರ ಡಿ.ಬಿ, ಪಿಎಸ್‌ಐ ಕವಿತಾ ಎಸ್ ಎಮ್, ಪಿ.ಎಸ್.ಐ ಸ್ವಾತಿ ಮುರಾರಿ, ಎಎಸ್‌ಐ ಶ್ರೀ ಎಮ್ ಆರ್ ಮಲ್ಲಿಗವಾಡ ಮತ್ತು ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಶ್ರೀನಿವಾಸ ಯರಗುಪ್ಪಿ, ಕೃಷ್ಣಾ ಮೋಟೆಬೆನ್ನೂರು, ಮಂಜುನಾಥ ಹಾಲವರ, ಪ್ರಕಾಶ ಕಲಗುಡಿ, ರೇಣು ಸಿಕ್ಕಲಗೇರ, ಮಾಬುಸಾಬ ಮುಲ್ಲಾ ಹಾಗೂ ಆರೂಢ ಕರೆಣ್ಣವರ ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರಾದ ಲಾಬೂರಾಮ ರವರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

