Breaking News

ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು ಕಾಲು ಜಾರಿ ಬಿದ್ದು ಬೆನ್ನು ಮೂಳೆಗೆ ಪೆಟ್ಟು….

ಬೆಂಗಳೂರು :ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು ಕಾಲು ಜಾರಿ ಬಿದ್ದು ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದು, ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಭಾನುವಾರ ಸಂಜೆ ತಮ್ಮ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಆರ್‌ಐ ಸ್ಕ್ಯಾನಿಂಗ್ ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೇರೆ ಯಾವುದೇ ತೊಂದರೆಯಾಗಿಲ್ಲ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಇಂದು ಹಾಸನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗಿದ ಸಾಲುಮರದ ತಿಮ್ಮಕ್ಕ, ಸಂಜೆ 4:30 ರ ಸಮಯದಲ್ಲಿ ಬೆಂಗಳೂರಿನ ಮಂಜುನಾಥ ನಗರದ ಬಾಡಿಗೆ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ತಿಮ್ಮಕ್ಕನವರ ಮಗ ಉಮೇಶ್ ತಿಳಿಸಿದರು.

Share News

About BigTv News

Check Also

ಎನಿ ಕಂಡೀಶನ್… ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ ಎಂಟ್ರಿ! ಬೆಳಗ್ಗೆಯೇ ಅಧಿಕಾರ ಸ್ವೀಕಾರ…!

ಭೂಷಣ್ ಬೋರ್ಸೆ ಹೆಗಲಿಗೆ ಅವಳಿ ನಗರದ ಖಾಕಿ ಹೊಣೆ! ನಾಳೆಯಿಂದ ಹುಬ್ಬಳ್ಳಿ–ಧಾರವಾಡಕ್ಕೆ ಹೊಸ ಕಮಿಷನರ್! ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ …

Leave a Reply

Your email address will not be published. Required fields are marked *