Breaking News

ಹುಬ್ಬಳ್ಳಿಯಲ್ಲಿ ಉಚಿತ ಆರೋಗ್ಯ ತಪಾಸಣೆ, ಔಷಧ ವಿತರಣೆ

ಹುಬ್ಬಳ್ಳಿ : ಎಲ್ಲಿ ನೋಡಿದರೂ ಜನವೋ ಜನ ಇದೇನೋ ಸರ್ಕಾರಿ ದವಾಖಾನೆಯೋ ಅಥವಾ ಯಾವುದಾದರೂ ಸಂಘಸಂಸ್ಥೆಗಳ ಕಾರ್ಯಕ್ರಮವೋ ಅಂತಿರಾ ಹಾಗಾದರೇ ನಿಮ್ಮ ಅಭಿಪ್ರಾಯ ಸುಳ್ಳು. ಸದ್ಯ ರಾಜ್ಯಾದ್ಯಂತ ಧರ್ಮ ದಂಗಲ್ ಮುಸುಕಿನ ಗುದ್ದಾಟ ದಿನದಿಂದ ದಿನಕ್ಕೆ ಸುದ್ದಿಯಾಗುತ್ತಿದೆ. ಆದರೇ ಸ್ಲಂ ಪ್ರದೇಶದಲ್ಲೊಂದು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹಿಂದೂ-ಮುಸ್ಲಿಂ ಸಮುದಾಯದವರು ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರ ಹಾಗೇ ಪಾಲ್ಗೊಂಡಿದ್ದು ನೋಡಿದರೇ ಅದುವೇ ನಮ್ಮ ಭಾವೈಕ್ಯತೆಯ ಭಾರತ ಎಂಬುದನ್ನು ತೋರಿಸುವ ದೃಶ್ಯ ಕಂಡು ಬಂದಿತು.

ಹಾದಿ ಎಜ್ಯುಕೇಶನಲ್ ಆ್ಯಂಡ್ ವೆಲ್ಫೇರ್ ಟ್ರಸ್ಟ್‌ ವತಿಯಿಂದ ವಾಣಿಜ್ಯ ನಗರಿ ಹುಬ್ಬಳ್ಳಿಯ ‌ಗೌಸಿಯಾ ನಗರದ ರಜಿಯಾಟೌನ್ ನಲ್ಲಿರುವ ಹಾದಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೆಲ್ತ್ ಕ್ಯಾಂಪ್ ನಲ್ಲಿ ಕಂಡು ಬಂದಂತಹ ಅಪರೂಪದ ದೃಶ್ಯವಾಗಿದೆ.

ಪ್ರಸ್ತುತ ದಿನಮಾನಗಳಲ್ಲಿ ಸ್ಲಂ ಪ್ರದೇಶಕ್ಕೆ ರೋಗ ರುಜಿನಗಳ ಸಂಖ್ಯೆ ದಟ್ಟವಾಗಿರುತ್ತೆ. ಆದರೇ ಇಂತಹ ಪ್ರದೇಶಗಳಲ್ಲಿ ವೈದ್ಯರೇ ಹೆಜ್ಜೆ ಇಡುವುದಿಲ್ಲ. ಇನ್ನೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆಯ ಕಾರ್ಯ ದೂರದ ಮಾತು.

ಆದರೇ ಹಾದಿ ಎಜ್ಯುಕೇಶನ್ ಆ್ಯಂಡ್ ವೆಲ್ಫೇರ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಮನ್ನನ್ನಿ ಉಸ್ತಾದ್ ಅವರ ನೇತೃತ್ವದ ಆಯೋಜನೆ ಮಾಡಿದ್ದ ಶಿಬಿರದಲ್ಲಿ
ನೀನೇ ರಾಮ, ನೀನೇ ಶಾಮ, ನೀನೇ ಅಲ್ಲಾ, ನೀನೆ ಏಸು ಎಂಬಂತೆ ಆರೋಗ್ಯದ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಆದರೇ ದೇವರು ಒಬ್ಬನೇ ನಾಮ ಹಲವು ಎಂಬ ತತ್ವವನ್ನು ಅಳವಡಿಸಿಕೊಂಡಿರುವ ಈ ಸ್ಲಂ ಜನತೆ ಯಾವುದೇ ಬೇಧ-ಭಾವವಿಲ್ಲದೇ ಉಚಿತ ಆರೋಗ್ಯ ಶಿಬಿರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನುರಿತ ವೈದ್ಯರಿಂದ ತಪಾಸಣೆ ಪಡೆದು ಉಚಿತ ಔಷಧಿಗಳನ್ನು ಪಡೆದರು.

ಇನ್ನೂ ಚಿಕ್ಕ ಮಕ್ಕಳಿಂದ ವೃದ್ಧರವರೆಗೂ ಹಾಗೂ ಅಂಗವಿಕಲರಿಗೂ ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಿಪಿ, ರಕ್ತದೊತ್ತಡ, ಶುಗರ್ ಪರೀಕ್ಷೆ ಮಾಡಲಾಯಿತು. ಇನ್ನೂ ಆರೋಗ್ಯಕ್ಕೆ ಸಂಬಂಧಿಸಿದ ತಪಾಸಣೆ ಮಾಡಿ ಅಲ್ಲಿಯೇ ಉಚಿತ ಔಷಧಿಗಳನ್ನು ಕೊಡುವ ಮೂಲಕ ಹಾದಿ ಎಜ್ಯುಕೇಶನಲ್ ಆ್ಯಂಡ್ ವೆಲಫೇರ್ ಟ್ರಸ್ಟ್ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *