ಗದಗ: ‘ಪ್ರಜಾಪ್ರಭುತ್ವದ ಉಳಿವಿಗಾಗಿ ಕಾಂಗ್ರೆಸ್ ದೇಶವ್ಯಾಪಿ ಸಕ್ರಿಯ ಹೋರಾಟ ಪ್ರಾರಂಭಿಸಿರುವ ಸಂದರ್ಭದಲ್ಲಿ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ತ್ಯಜಿಸುವ ನಿರ್ಣಯ ಕೈಗೊಂಡಿರುವುದು ಕೋಮುವಾದಿಗೆ ಬಲ ತುಂಬುವ ಪ್ರಯತ್ನವೇ ಹೊರತು ಬೇರೆನೂ ಅಲ್ಲ.
ಕಾಂಗ್ರೆಸ್‌ನ ಪ್ರತಿ ಕಾರ್ಯಕರ್ತನೂ ಅವರ ನಿಲುವನ್ನು ತೀಕ್ಷ್ಣವಾಗಿ ವಿರೋಧಿಸುತ್ತಾನೆ’ ಎಂದು ಶಾಸಕ ಎಚ್.ಕೆ.ಪಾಟೀಲ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಪಕ್ಷ ಸಕ್ರಿಯವಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಸಂದರ್ಭದಲ್ಲಿ ಆಜಾದ್ ಜನದ್ರೋಹಿ ನಿರ್ಣಯ ಕೈಗೊಂಡಿದ್ದಾರೆ. ಆದರೆ, ಅವರ ಈ ನಿರ್ಧಾರ ಕಾಂಗ್ರೆಸ್ ಇನ್ನಷ್ಟು ಗಟ್ಟಿಯಾಗಿ ಹೋರಾಟ ನಡೆಸುವ ಸಂದರ್ಭ ಸೃಷ್ಟಿಸಿದೆ’ ಎಂದು ಹೇಳಿದರು.
‘ಭಾರತ್ ಜೋಡೋ ಪಾದಯಾತ್ರೆ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಸರ್ವಾನುಮತದ ನಿರ್ಣಯ. ಹಿರಿಯ ನಾಯಕರಾಗಿದ್ದ ಆಜಾದ್ ಅವರು ಪಕ್ಷ ತ್ಯಜಿಸಿ ಆರೋಪ ಮಾಡುವ ಬದಲು, ಪಕ್ಷದಲ್ಲಿದ್ದಾಗಲೇ ಕಾಂಗ್ರೆಸ್ ಜೋಡೋ ಕಾರ್ಯಕ್ರಮ ಮಾಡಿ ಅಂತ ಹೇಳಬೇಕಿತ್ತು’ ಎಂದು ವಾಗ್ದಾಳಿ ನಡೆಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

