Breaking News

ಬಾಣಗಿತ್ತಿ ಗುಡಿಹಾಳ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಜೊತೆಗೆ ಈದ್ ಮಿಲಾದ್ ಆಚರಣೆ

ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ಬಾಣಗಿತ್ತಿ ಗುಡಿಹಾಳ ಗ್ರಾಮದಲ್ಲಿ ಬೇಧಭಾವ ಇಲ್ಲದೆ ಹಬ್ಬದ ಸಡಗರ ಜೊತೆಗೆ ಭಾವೈಕ್ಯತೆ ಬ್ರಾತೃತ್ವವನ್ನು ಗ್ರಾಮೀಣ ಯುವಕರು ಸಾರಿದ್ದಾರೆ.

ಈ ದಿನ ವಾಲ್ಮೀಕಿ ಜಯಂತಿ ,ಸಿಗೆಹುಣ್ಣಿಮೆ ಜೊತೆಗೆ ಈದ್ ಮಿಲಾದ್ ಒಂದೇ ದಿನ ಬಂದಿದ್ದರು ಈ ಗ್ರಾಮದಲ್ಲಿ ಯಾವುದೇ ಬೇಧ ಭಾವ ಇಲ್ಲದೆ ಗ್ರಾಮದ ಎಲ್ಲಾ ಧರ್ಮದ ಯುವಕರು ವಾಲ್ಮೀಕಿ ಜಯಂತಿ ಜೊತೆಗೆ ಈದ್ ಮಿಲಾದ್ ಹಬ್ಬವನ್ನು ಆಚರಣೆ ಮಾಡಿ ಬ್ರಾತೃತ್ವವನ್ನು ಸಾರಿದ್ದಾರೆ.

ಗ್ರಾಮದ ವಿಶ್ವನಾಥ್ ಕೊರವರ ನೇತೃತ್ವದಲ್ಲಿ ಜಾಫರ್ ಜಮೀಹಾಳ್, ಮಲ್ಲಿಕ್ ಮೊರಬ್ ,ಬಸು ಕುರುಬರ ಸೇರಿದಂತೆ ಗ್ರಾಮದ ಗುರು ಹಿರಿಯರು ಎರಡು ಕಾರ್ಯಕ್ರಮವನ್ನ ಅದ್ದೂರಿಯಾಗಿ ಆಚರಿಸಿ ಪರಸ್ಪರ ಶುಭಾಶಯ ಕೋರಿ ಸಂಭ್ರಮಿಸಿದರು.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *