Breaking News

ಅಪಘಾತದಲ್ಲಿ ವಿದ್ಯಾರ್ಥಿ ಸಾವು :ನಾಲ್ವರ ರೋಗಿಗಳಿಗೆ ಮರುಜನ್ಮ ನೀಡಿದ ಪೋಷಕರು

ಹುಬ್ಬಳ್ಳಿ : ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿ BRTS ಡಿವೈಡರ್ ಗೆ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಪವನ್ ಕಮ್ಮರ್ ಮೆದುಳು ನಿಷ್ಕ್ರಿಯಗೊಂಡು ಅಸುನೀಗಿದರು , ಹೆಲ್ಮೆಟ್ ದರಿಸಿದೆ ವೇಗವಾಗಿ ಹೋಗಿ ಆಕ್ಸಿಡೆಂಟ್ ಆಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಕೂಡಲೇ ಪವನ್ ಕಮ್ಮರ್ ನನ್ನು ಸ್ಥಳೀಯರು ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗೆ ದಾಖಲು ಮಾಡಿದ್ದರು ಈ ವೇಳೆ ವೈದ್ಯರ ಮನವಿ ಮೇರೆಗೆ ಪವನ್ ಪೋಷಕರು ಅಂಗಾಂಗ ದಾನ ಮಾಡುವ ಮೂಲಕ ನಾಲ್ವರು ರೋಗಿಗಳಿಗೆ ಮರುಜನ್ಮ ನೀಡಿದ್ದಾರೆ ಹುಬ್ಬಳ್ಳಿಯ ಸುಚಿರಾಯು, ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಕಿಡ್ನಿ, ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ಲಿವ‌ರ್ ಹಾಗೂ ಕಿಮ್ಸ್‌ಗೆ ಆಸ್ಪತ್ರೆಗೆ ಎರಡು ಕಣ್ಣುಗಳ ದಾನ ಮಾಡಲಾಗಿದೆ’ ಎಂದು ಮೂತ್ರಪಿಂಡ ವಂಕಟೇಶ ಮೊಗೇರ ತಿಳಿಸಿದ್ದಾರೆ.

ಇನ್ನು ಅಂಗಾಂಗ ದಾನ ಪ್ರಕ್ರಿಯೆಯಲ್ಲಿ ಡಾ. ಭರತ ಕ್ಷತ್ರಿ, ಡಾ.ಎಸ್.ಬಿ.ಬಳಿಗಾರ, ಡಾ. ಈಶ್ವರ ಹೊಸಮನಿ, ಡಾ. ವಿದ್ಯಾ ನೇತೃತ್ವದ ತಂಡ ಯಶಸ್ವಿಯಾಗಿ ಕಸಿ ನಡೆಸಿದ್ದು ಪೋಷಕರ ನಿರ್ಧಾರವನ್ನ ಶ್ಲಾಘನೆ ಮಾಡಿದ್ದಾರೆ.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *