ಉತ್ತರ ಪ್ರದೇಶದ ಸೋನಭದ್ರದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಕಾರನ್ನು ತಪಾಸಣೆಗೆ ನಿಲ್ಲಿಸಲು ಪೊಲೀಸರು ಸೂಚಿಸಿದರೂ, ಆರೋಪಿಗಳು ವೇಗವಾಗಿ ಪರಾರಿಯಾಗಲು ಯತ್ನಿಸಿದರು. ವಿಶೇಷ ಕಾರ್ಯಾಚರಣೆ ತಂಡ (SOG) ಬೆನ್ನಟ್ಟಿದ ವೇಳೆ ಆರೋಪಿಗಳು ಪೊಲೀಸರ ವಾಹನಕ್ಕೆ ಡಿಕ್ಕಿ ಹೊಡೆದು ಹಾನಿಗೊಳಿಸಿದ್ದರು. ಆದರೂ ಸ್ಥಳೀಯರ ಸಹಾಯದಿಂದ ಮತ್ತೊಂದು ವಾಹನ ಪಡೆದು ಪೊಲೀಸರು ಚೇಸಿಂಗ್ ಮುಂದುವರಿಸಿದರು. ಬಂಧನದಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಕಾರಿನಿಂದ ₹100 ಮುಖಬೆಲೆಯ ನೋಟುಗಳನ್ನು ರಸ್ತೆಗೆ ಎಸೆದು ಪೊಲೀಸರ ಗಮನ ಬೇರೆಡೆ ಸೆಳೆಯಲು ಯತ್ನಿಸಿದರು. ಆದರೆ ಪೊಲೀಸರು ಅದಕ್ಕೆ ಮರುಳಾಗದೆ ಕಾರನ್ನು ಸುತ್ತುವರಿದು ನಿಲ್ಲಿಸಿದರು. ಬಳಿಕ ಆರೋಪಿಗಳು ಗುಂಡಿನ ದಾಳಿ ನಡೆಸಿದಾಗ ಪೊಲೀಸರು ಪ್ರತಿದಾಳಿ ನಡೆಸಿ, ಲುಧಿಯಾನ ಮೂಲದ 27 ವರ್ಷದ ಪ್ರಿನ್ಸ್ ಎಂಬಾತನನ್ನು ಬಂಧಿಸಿದರು. ಕಾರು ತಪಾಸಣೆಯಲ್ಲಿ ಸುಮಾರು 3 ಕೆಜಿ ಅಫೀಮು, 225 ಕೆಜಿ ಗಸಗಸೆ ಸಿಪ್ಪೆ, ₹50,000 ನಗದು ಹಾಗೂ ಪಿಸ್ತೂಲ್ ಪತ್ತೆಯಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹58.75 ಲಕ್ಷ ಎಂದು ಅಂದಾಜಿಸಲಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

