ಆ ಹೊತ್ತಿಗೆ ಅಮಿತಾಭ್ ಬಚ್ಚನ್ ಮನೆಯಿಂದ ಹೊರಬರಬಹುದು ಎಂದು ಅಭಿಮಾನಿಗಳ್ಯಾರೂ ನಿರೀಕ್ಷಿಸಿರಲಿಲ್ಲ. ಆದರೂ, ಮಂಗಳವಾರ ಅವರ 80ನೇ ಹುಟ್ಟುಹಬ್ಬವಾದ್ದ ರಿಂದ, ಸೋಮವಾರ ಮಧ್ಯರಾತ್ರಿ ಅವರ ಮನೆ ಮುಂದೆ ಹೋಗಿ, ಹ್ಯಾಪಿ ಬರ್ತ್ಡೇ ಹಾಡಬೇಕು ಎಂದು ಜನ ಪ್ಲ್ಯಾನ್ ಮಾಡಿಕೊಂಡಿದ್ದರು.
ಅದರಂತೆ ಮುಂಬೈನ ಬಚ್ಚನ್ ಅವರ ಜಲ್ಸಾ ಮನೆಯ ಎದುರು ಸೇರಿದ್ದರು. 12 ಗಂಟೆಗೆ ಹ್ಯಾಪಿ ಬರ್ತ್ಡೇ ಎನ್ನುವಷ್ಟರಲ್ಲೇ, ಅಮಿತಾಭ್ ಪ್ರತ್ಯಕ್ಷರಾದರು.
ಮಗಳು ಶ್ವೇತಾ ನಂದಾ ಜತೆಗೆ ಮನೆಯಿಂದ ಹೊರಬಂದು, ನೆರೆದಿದ್ದ ಸಾವಿರಾರು ಜನರಿಗೆ ದರ್ಶನ ಕೊಟ್ಟು ಅವರಿಂದ ಅಭಿನಂದನೆಗಳನ್ನು ಸ್ವೀಕರಿಸಿದರು. ಇನ್ನು, ದೇಶದ ಹಲವು ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ ಅಮಿತಾಭ್ ಅಭಿನಯದ ಹಲವು ಚಿತ್ರಗಳನ್ನು ಪ್ರದರ್ಶಿಸಲಾಯಿತು. ರಾತ್ರಿ 12ಕ್ಕೆ ಪ್ರದರ್ಶನ ನಿಲ್ಲಿಸಿ, ‘ಹ್ಯಾಪಿ ಬರ್ತ್ಡೇ’ ಹಾಡಿ ಶುಭ ಕೋರಲಾಯಿತು. ಶುಭ ಕೋರಿದ ಎಲ್ಲರಿಗೂ ಜಾಲ ತಾಣ ಮೂಲಕ ಧನ್ಯವಾದ ಸಲ್ಲಿಸಿ ದ್ದಾರೆ ಅಮಿತಾಭ್.
bigtvnews | Hubli Dharwad News | Kannada News | Karnataka News Hubli News | News In Hubli | Local news

