Breaking News

ಪವರ್ ಸ್ಟಾರ್ ಮೊದಲ ವರ್ಷದ ಪುಣ್ಯಸ್ಮರಣೆ : ಸಮಾಧಿ ಬಳಿ 75 ಕಟೌಟ್​ಗಳ ನಿರ್ಮಾಣ


ಬೆಂಗಳೂರು : ಪುನೀತ್​ ರಾಜ್​ಕುಮಾರ್​ ಪುಣ್ಯಸ್ಮರಣೆ ಪ್ರಯುಕ್ತ ಸಮಾಧಿ ಬಳಿ 75 ಕಟೌಟ್​ಗಳನ್ನು ನಿಲ್ಲಿಸಲು ಪ್ಲ್ಯಾನ್​ ಮಾಡಲಾಗಿದೆ. ಚಿತ್ರಮಂದಿರಗಳ ಎದುರಲ್ಲೂ ‘ಪವರ್​ ಸ್ಟಾರ್​’ ಕಟೌಟ್ಸ್​ ರಾರಾಜಿಸಲಿವೆ. ನಟ ಪುನೀತ್​ ರಾಜ್​ಕುಮಾರ್​ ಅವರು ನಿಧನರಾಗಿ ಒಂದು ವರ್ಷ ಕಳೆಯುತ್ತ ಬಂದಿದೆ.

ಅಕ್ಟೋಬರ್​ 29ರಂದು ಮೊದಲ ವರ್ಷದ ಪುಣ್ಯಸ್ಮರಣೆ. ಅದಕ್ಕೂ ಒಂದು ದಿನ ಮುನ್ನ (ಅ.28) ‘ಗಂಧದ ಗುಡಿ’ ರಿಲೀಸ್​ ಆಗಲಿದೆ. ಅ.21ರಂದು ‘ಪುನೀತ ಪರ್ವ’ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲ ವಿಶೇಷ ದಿನಗಳಿಗಾಗಿ ಪುನೀತ್​ ರಾಜ್​ಕುಮಾರ್​ ಫ್ಯಾನ್ಸ್​ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಪುಣ್ಯಸ್ಮರಣೆ  ಪ್ರಯುಕ್ತ ಅಪ್ಪು ಸಮಾಧಿ ಬಳಿ 75 ಕಟೌಟ್​ಗಳನ್ನು ನಿಲ್ಲಿಸಲು ಅಭಿಮಾನಿಗಳು ಪ್ಲ್ಯಾನ್​ ಮಾಡಿದ್ದಾರೆ. ಚಿತ್ರಮಂದಿರಗಳ ಎದುರಲ್ಲೂ ‘ಪವರ್​ ಸ್ಟಾರ್​’ ಕಟೌಟ್ಸ್​ ರಾರಾಜಿಸಲಿವೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *