Breaking News

ಸರ್ಕಾರಕ್ಕೆ ಪತ್ರ ಬರೆದ ಬಸವರಾಜ ಹೊರಟ್ಟಿ


ಹುಬ್ಬಳ್ಳಿ: ದಸರಾಕ್ಕೆ ಶಾಲೆಗಳಿಗೆ ನೀಡುವ ಒಂದು ತಿಂಗಳ ರಜೆಯನ್ನು 15 ದಿನಕ್ಕೆ ಸೀಮಿತಗೊಳಿಸಿರುವ ಸರ್ಕಾರದ ನಡೆಗೆ ಮಾಜಿ ಸಭಾಪತಿ ಮತ್ತು ಹಾಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶಿಕ್ಷಣ ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ. ದಸರಾಗೆ ಈ ಮುಂಚೆ ಒಂದು ತಿಂಗಳು ರಜೆ ಕೊಡಲಾಗುತ್ತಿತ್ತು. ಹಾಗೇ ಎರಡು ತಿಂಗಳ ಬೇಸಿಗೆ ರಜೆ ನೀಡಲಾಗುತ್ತಿತ್ತು. ಆದ್ರೆ ಈ ಬಾರಿ ಕೇವಲ 15 ದಿನ ರಜೆ ನೀಡಿರೋದು ಸರಿಯಲ್ಲ. ದಸರಾ ಮತ್ತು ದೀಪಾವಳಿ ಹಬ್ಬ ಎರಡೂ ಒಂದೇ ತಿಂಗಳಲ್ಲಿ ಬಂದಿವೆ. ಹೀಗಾಗಿ ಈ ಎರಡೂ ಹಬ್ಬ ಮುಗಿಯೋವರೆಗೆ ರಜೆ ಕೊಡಬೇಕಾಗಿತ್ತು ಎಂದು ಆಗ್ರಹಿಸಿದ್ದಾರೆ.

Share News

About BigTv News

Check Also

ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!

ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ …

Leave a Reply

Your email address will not be published. Required fields are marked *