Breaking News

ಭಾರತಕ್ಕೆ ಮಾ. 20 ರಂದು ನವೀನ್ ಪಾರ್ಥೀವ ಶರೀರ ಮರಳಿದೆ


ನವದೆಹಲಿ: ಉಕ್ರೇನ್‌ಲ್ಲಿ ಮೃತಪಟ್ಟ ರಾಣಿಬೆನ್ನೂರು ತಾಲೂಕಿನ ವೈದ್ಯಕೀಯ ವಿದ್ಯಾರ್ಥಿ ನವೀನ್ ಶೇಕರಪ್ಪ ಪಾರ್ಥೀವ ಶರೀರ ಮಾ. 20 ರಂದು ಮುಂಜಾನೆ 3 ಗಂಟೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾನುವಾರ ಭಾರತಕ್ಕೆ ಆಗಮಿಸಲಿದೆ.

ಘಟನೆ : ಮಾರ್ಚ್ 1 ರಂದು ಉಕ್ರೇನ್‌ನ ಖಾರ್ಕೀವ್‌ನಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ನವೀನ್ ಶೇಕರಪ್ಪ ಮೃತಪಟ್ಟಿದ್ದರು. ಯುದ್ಧದಿಂದಾಗಿ ಮೃತದೇಹ ತರಲು ಸಾಧ್ಯವಾಗಿರಿಲ್ಲ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಸತತ ಪರಿಶ್ರಮಪಟ್ಟಿತ್ತು. ದುರ್ಘಟನೆ ನಡೆದ ಖಾರ್ಕೀವ್‌ನಲ್ಲಿ ಈಗಿನ ಪರಿಸ್ಥಿತಿಯ ಕಾರಣ ಅಲ್ಲಿಗೆ ಯಾವುದೇ ವಿಮಾನಗಳು ತೆರಳುತ್ತಿಲ್ಲ. ಜೊತೆಗೆ ಸಮೀಪದಲ್ಲೂ ಎಲ್ಲೂ ಏರ್‌ಸ್ಟ್ರಿಪ್‌ ಕೂಡಾ ಇಲ್ಲ. ಹೀಗಾಗಿ ನವೀನ್‌ ಮೃತದೇಹವನ್ನು ಭಾರತಕ್ಕೆ ತರುವಲ್ಲಿ ವಿಳಂಬವಾಗಿತ್ತು. ಭಾರತದ ಸತತ ಪ್ರಯತ್ನದಿಂದ ಇದೀಗ ನವೀನ್ ಮೃತದೇಹ ಭಾರತಕ್ಕೆ ಆಗಮಿಸುತ್ತಿದೆ.

Share News

About admin

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *