Breaking News

ಅಮೆರಿಕದಲ್ಲಿ ಭೀಕರ ಅಪಘಾತ : 3 ಭಾರತೀಯ ವಿದ್ಯಾರ್ಥಿಗಳು ಸಾವು


ವಾಷಿಂಗ್ಟನ್; ಅಮೆರಿಕದಲ್ಲಿ ಭೀಕರ ಅಪಘಾತ ನಡೆದಿದ್ದು, ಮೂವರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಯುನೈಟೆ ಸ್ಟೇಟ್ಸ್‌ನ ಪಶ್ಚಿಮ ಮ್ಯಾಸಚೂಸೆಟ್ಸ್‌ನಲ್ಲಿ ಈ ಘಟನೆ ನಡೆದಿದೆ. ಕಾರು ಹಾಗೂ ಮತ್ತೊಂದು ವಾಹನದ ನಡುವೆ ಡಿಕ್ಕಿ ಸಂಭವಿಸಿ ಭೀಕರ ಅಪಘಾತ ಸಂಭವಿಸಿದೆ.

ಆಂಧ್ರಪ್ರದೇಶ ಮೂಲದವರಾದ ಪ್ರೇಮ್ ಕುಮಾರ್ ರೆಡ್ಡಿ ಗೋಡಾ (27), ಪಾವನಿ ಗುಲ್ಲಪಲ್ಲಿ (22) ಮತ್ತು ಸಾಯಿ ನರಸಿಂಹ ಪಟಂಶೆಟ್ಟಿ (22) ಮೃತ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಐವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಮನೋಜ್ ರೆಡ್ಡಿ ದೊಂಡ, ಶ್ರೀಧರ್ ರೆಡ್ಡಿ ಚಿಂತಕುಂಟಾ, ವಿಜಿತ್ ರೆಡ್ಡಿ ಗುಮ್ಮಲ ಹಾಗೂ ಹಿಮಾ ಐಶ್ವರ್ಯ ಸಿದ್ದಿರೆಡ್ಡಿ ಗಾಯಾಳುಗಳು. ಇವರಿಗೆ ಬರ್ಕ್‍ಶೈರ್ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Share News

About BigTv News

Check Also

ಬೆಳಗಾವಿಯಲ್ಲಿ ‘ಕರ್ನಾಟಕ ಬಂದ್’ಗೆ ಅಭೂತಪೂರ್ವ ಬೆಂಬಲ : ಧಾರವಾಡದಲ್ಲಿ ನಿಷೇಧಾಜ್ಞೆ ಜಾರಿ

ಬೆಳಗಾವಿ/ಧಾರವಾಡ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಉತ್ತರ ಕರ್ನಾಟಕದಾದ್ಯಂತ ವ್ಯಾಪಕ ಬೆಂಬಲ …

Leave a Reply

Your email address will not be published. Required fields are marked *