Breaking News

ದುನಿಯಾ ವಿಜಿ ಮೇಲೆ ಸೀಕ್ರೆಟ್ಟಾಗಿ ರೆಡಿಯಾಗ್ತಿದೆಯಾ ರೌಡಿ ಶೀಟ್!?

ಜಿಮ್ ಟ್ರೈನರ್ ಮಾರುತಿ ಗೌಡ ಎಂಬ ಯುವಕನನ್ನು ಅಪಹರಿಸಿ, ಹಲ್ಲೆ ಮಾಡಿದ ಆರೋಪದಡಿ ಬಂಧಿತರಾಗಿರೋ ನಟ ದುನಿಯಾ ವಿಜಯ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇತ್ತ ದುನಿಯಾ ವಿಜಯ್ ವಿರುದ್ಧ ರೌಡಿ ಶೀಟ್ ಓಪನ್ ಮಾಡೋ ಬಗ್ಗೆಯೂ ಪೊಲೀಸ್ ಇಲಾಖೆ ಗಂಭೀರ ಚಿಂತನೆ ನಡೆಸಿದೆ.
ರೌಡಿ ಶೀಟ್ ಓಪನ್ ಆಗಲು ಎಷ್ಟು ಕೇಸ್ ಮಾಡಿರಬೇಕು?
ರೌಡಿ ಶೀಟ್ ಓಪನ್ ಆಗಲು ಸಾಮಾನ್ಯವಾಗಿ ಒಂದು ಹೀನಸ್ ಕೇಸ್ (Heinous case) ಹಾಗೂ ಎರಡು ನಾನ್ ಹೀನಸ್ ಕೇಸ್ ಕೃತ್ಯಗಳಲ್ಲಿ ತೊಡಗಿಸಿಕೊಂಡ ಆರೋಪಿಗಳ‌ ಮೇಲೆ ರೌಡಿ ಶೀಟ್ ಓಪನ್ ಮಾಡಲಾಗುತ್ತೆ. ಕೊಲೆ, ರಾಬರಿ, ಡಕಾಯಿತಿ ಕೃತ್ಯಗಳನ್ನ ಪೊಲೀಸ್ ಭಾಷೆಯಲ್ಲಿ ಹೀನಸ್ ಕ್ರೈಂ ಅಂತಾ ಹೇಳ್ತಾರೆ. ಹಲ್ಲೆ ಮಾಡುವುದು, ಧಮ್ಕಿ ಹಾಕುವುದಕ್ಕೆ ನಾನ್ ಹೀನಸ್ ಕ್ರೈಂ ಅಂತ ಹೇಳ್ತಾರೆ.
ಈ ರೀತಿಯಾಗಿ ಯಾವುದೇ ವ್ಯಕ್ತಿ ಒಂದು ಹೀನಸ್ ಅಥವಾ ಎರಡು ನಾನ್ ಹೀನಸ್ ಕ್ತೈಂ ಆಕ್ಟಿವಿಟೀಸ್ ನಲ್ಲಿ ತೊಡಗಿಸಿಕೊಂಡರೆ ಆತನ ವಿರುದ್ಧ ರೌಡಿ ಶೀಟ್ ಓಪನ್ ಮಾಡಬಹುದು. ಸದ್ಯ ದುನಿಯಾ ವಿಜಿ ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ಸೆ. 22 ರಂದು ತನ್ನ ಕಾರಿನಲ್ಲಿ ಹೊತ್ತೊಯ್ದು ಹಲ್ಲೆ ಮಾಡಿದ್ದರೆ, 2013 ರಲ್ಲಿ ವಿಜಿ‌ ಮೊದಲ ಪತ್ನಿ ನಾಗರತ್ನ ಗೆ ಜೀವ ಬೆದರಿಕೆ ಹಾಕಿ, ಅದೇ ವರ್ಷ ವಿಜಿ ಸಂಬಂಧಿ ಶಿವಶಂಕರೇ ಗೌಡ ಎಂಬುವವರ ಮೇಲೆ ಹಲ್ಲೆ ಮಾಡಿದ ಪ್ರಕರಣ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಇನ್ನು, ಮಾಸ್ತಿಗುಡಿ ಸಿನಿಮಾ ದುರಂತದ ನಂತರ ನಿರ್ಮಾಪಕ‌ ಸುಂದರ್ ಗೌಡನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಪೊಲೀಸರ ವಿಚಾರಣೆಗೆ ಅಡ್ಡಿಪಡ್ಡಿಸಿದ ಆರೋಪ ವಿಜಿ ವಿರುದ್ಧ ಕೇಳಿಬಂದಿತ್ತು. ಅದಾದಮೇಲೆ, ಕಾರ್ ಡ್ರೈವ್ ಮಾಡುವ ವಿಚಾರಕ್ಕೆ ವೃದ್ಧ ದಂಪತಿಗೆ ಕಾಲಿನಲ್ಲಿ ಒದ್ದು ಹಲ್ಲೆ ಮಾಡಿದ ಆರೋಪದ ಜೊತೆಗೆ, ಇತ್ತೀಚೆಗೆ ನಿವೃತ್ತ ಯೋಧ ರೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪವೂ ವಿಜಿ ಮೇಲಿದೆ.
ಇನ್ನು ಕಳೆದ ಮಾರ್ಚ್ ನಲ್ಲಿ ಸುಂದರ್ ಗೌಡನ ಮದುವೆ ವಿಚಾರದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ವಿಜಯ್ ನನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿ ಕರೆತಂದಿದ್ರು. ಆಗ ಸ್ಟೇಷನ್ ಬೇಲ್ ಪಡೆದು ದುನಿಯಾ ವಿಜಿ ಸೆರೆವಾಸದಿಂದ ತಪ್ಪಿಸಿಕೊಂಡಿದ್ರು.
ಸದ್ಯ ಇದುವರೆಗೂ ವಿಜಯ್ ಮೂರು ಬಾರಿ ಸ್ಟೇಷನ್ ಬೇಲ್ ಪಡೆದಿದ್ದಾರೆ. ದುನಿಯಾ ವಿಜಿ ಆತನ ಹೆಂಡತಿ ನಾಗರತ್ನ, ಜಿಮ್ ಟ್ರೈನರ್ ಮಾರುತಿಗೌಡ, ನಿವೃತ್ತ ಯೋಧ ವೆಂಕಟೇಶ್ ನಿರ್ಮಾಪಕ‌ ಜಯಣ್ಣ ಮೇಲೆ ಹಲ್ಲೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹೀಗೆ ದುನಿಯಾ ವಿಜಿ ಮೇಲೆ ಐದು ನಾನು ಹೀನಸ್ ಹಾಗೂ ಒಂದು ಹೀನಸ್ ಕೇಸ್ ಗಳು ಸೇರಿ ‌ಒಟ್ಟಾರೆ ಆರು ಹಳೆ ಕೇಸ್ ಗಳಿವೆ. ಹೀಗಾಗಿ ಪೊಲೀಸರು ದುನಿಯಾ ವಿಜಿ‌ ಮೇಲೆ ರೌಡಿಶೀಟ್ ತೆರೆದರೂ ಯಾವುದೇ ಅಚ್ಚರಿಯಿಲ್ಲ…!!
ಸಮಸ್ಯೆ ತಂದಿಡುತ್ತಾ ದುನಿಯಾ ವಿಜಯ್‌ ವಿರುದ್ಧದ ಹಳೇ ಸಿಟ್ಟು?
2013 ರಲ್ಲಿ ರವಿ ಬೆಳಗೆರೆ ನಿರ್ದೇಶನದಲ್ಲಿ‌ ಮುಖ್ಯಮಂತ್ರಿ ಐ ಲವ್ ಯೂ ಸಿನಿಮಾ ಸೆಟ್ಟೇರಿತ್ತು.‌ ಇದು ಮುಖ್ಯಮಂತ್ರಿಯೊಬ್ಬರ ಕುರಿತಾದ ಚಿತ್ರ ಅಂತ ತುಂಬಾನೇ ಸದ್ದು ಮಾಡಿತ್ತು. ಚಿತ್ರಕ್ಕೆ ದುನಿಯಾ ವಿಜಯ್ ನಾಯಕರಾಗಿ ಆಯ್ಕೆಯಾಗಿದ್ರು. ಚಿತ್ರಕ್ಕೆ ವಿರೋಧವನ್ನ ವ್ಯಕ್ತಪಡಿಸಿ ದೇವೇಗೌಡರು 10 ಕೋಟಿ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿತ್ತು. ಕಡೆಗೆ ಸಿನಿಮಾ ಚಿತ್ರೀಕರಣವಾಗದೇ ನಿಂತುಹೋಯ್ತು. ಈ‌ ಸಿನಿಮಾದಲ್ಲಿ ದುನಿಯಾ ವಿಜಿ ನಾಯಕನೆಂದು ತಿಳಿದಾಗ ಚಿತ್ರದಲ್ಲಿ ನಟಿಸದಂತೆ ಸ್ವತ: ಕುಮಾರಸ್ವಾಮಿ ಕರೆ ಮಾಡಿ ದುನಿಯಾ ವಿಜಿ ಬಳಿ ಮಾತನಾಡಿದ್ರು ಅಂತ ವಿಜಿ ಆಪ್ತರು ಹೇಳ್ತಾರೆ.
ಹಳೇ ಪ್ರಕರಣಗಳ ಹಿಸ್ಟರಿಯೇ..ಅವರ ವಿರುದ್ಧ ರೌಡಿ ಶೀಟ್‌ ಓಪನ್​ಗೆ ಹೆಚ್ಚು ಪುಷ್ಠಿ ನೀಡುವಂತಿದೆ!
ಆದ್ರೆ ಅಂದು ಅದಕ್ಕೆ ಒಪ್ಪದ ದುನಿಯಾ ವಿಜಿ ನಾನೊಬ್ಬ ನಟ ಯಾರದ್ದೇ ಚಿತ್ರವಾದ್ರೂ ಅಭಿನಯಿಸ್ತೇನೆ ಅಂದಿದ್ರಂತೆ. ಅಂದಿನಿಂದ ದೇವೇಗೌಡರ ಕುಟುಂಬಕ್ಕೂ ದುನಿಯಾ ವಿಜಿಗೂ ಅಷ್ಟಕ್ಕಷ್ಟೆ ಅನ್ನೋದನ್ನೂ ವಿಜಿ ಆಪ್ತರು ಮಾತಾಡ್ತಾರೆ. ಜೊತೆಗೆ ಸದ್ಯ ದುನಿಯಾ ವಿಜಿ ವಿರುದ್ಧ ದೂರು ದಾಖಲಾಗಿರೋದು ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ. ಹೈ ಗ್ರೌಂಡ್ ಸ್ಟೇಷನ್ ಬರೋದು ಕೇಂದ್ರ ವಿಭಾಗದ ಅಡಿಯಲ್ಲಿ. ಕೇಂದ್ರ ವಿಭಾಗದ ಡಿಸಿಪಿ ದೇವರಾಜು ಈ ಹಿಂದೆ 2013 ರಲ್ಲಿ ಸಿಸಿಬಿ ಯಲ್ಲಿ ಡಿಸಿಪಿ ಯಾಗಿದ್ದಾಗ ದುನಿಯಾ ವಿಜಿ ನಾಗರತ್ನರ ಮೇಲೆ ಹಲ್ಲೆ ಮಾಡಿ ಜೀವಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಿಯನ್ನ ವಿಚಾರಣೆ ನಡೆಸಿದ್ರು. ವಿಜಿ ಕೂಡ ನನ್ನ ಕೌಟುಂಬಿಕ ಸಮಸ್ಯೆ ಹೆಚ್ಚಾಗಲು ಡಿಸಿಪಿ ದೇವರಾಜ್ ಕೂಡ ಕಾರಣ ಅಂತ ಹರಿಹಾಯ್ದಿದ್ದರು. ಈ ಕಾರಣಕ್ಕೆ ಡಿಸಿಪಿ ದೇವರಾಜು ಅವರಿಗೇನಾದ್ರೂ ಹಳೆ ಕೋಪ ಇನ್ನೂ ಇದ್ದರೆ.. ದುನಿಯಾ ವಿಜಿಗೆ ಸಮಸ್ಯೆಯಾಗಬಹುದು ಅನ್ನೋ ಚಿಂತೆ ವಿಜಿ ಆಪ್ತರನ್ನ ಕಾಡ್ತಿದೆ. ಆದ್ರೆ ದೇವೇಗೌಡರ ಕುಟುಂಬದ ಒತ್ತಡವೋ, ಇಲ್ಲಾ ಡಿಸಿಪಿ ದೇವರಾಜ್‌ರ ಕೋಪವೋ, ಅಥವಾ ಇವೆರಡಕ್ಕಿಂತ ವಿಜಯ್ ಮೇಲಿರೋ ಪ್ರಕರಣಗಳ ಹಿಸ್ಟರಿಯೇ.. ಅವರ ವಿರುದ್ಧ ರೌಡಿ ಶೀಟ್‌ ಓಪನ್‌ ಮಾಡಲು ಹೆಚ್ಚು ಪುಷ್ಠಿ ನೀಡುವಂತಿವೆ.
ಹಾಗಾದ್ರೆ ರೌಡಿ ಶೀಟ್‌ ಓಪನ್ ಆಗೋದು ಪಕ್ಕಾನಾ?
ಮಾರುತಿ ಗೌಡನ ಮೇಲೆ ಹಲ್ಲೆ ನಡೆದ ನಂತರ ದಕ್ಷಿಣ ವಿಭಾಗ ಡಿಸಿಪಿ‌ ಶರಣಪ್ಪರಿಂದ ದುನಿಯಾ ವಿಜಿ ಹಳೆ ಪ್ರಕರಣಗಳ ಮಾಹಿತಿಯನ್ನ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್‌ಕುಮಾರ್ ಪಡೆದಿದ್ರು. ಸದ್ಯ ದುನಿಯಾ ವಿಜಿ ವಿರುದ್ಧ ರೌಡಿ ಶೀಟ್ ತೆರೆಯುವ ಬಗ್ಗೆ ಅಪರಾಧ ವಿಭಾಗದ ಅಪರ ಆಯುಕ್ತರಾದ ಅಲೋಕ್ ಕುಮಾರ್ ಸಿಸಿಬಿ ರೌಡಿ ಸ್ಕ್ವಾಡ್‌ನ ಶೂಟೌಟ್ ಸ್ಪೆಷಲಿಸ್ಟ್ ಇನ್ಸ್‌ಪೆಕ್ಟರ್ ಪ್ರಕಾಶ್‌ಗೆ ಮೌಖಿಕ ಆದೇಶ ನೀಡಿದ್ದಾರೆನ್ನಲಾಗಿದೆ.
ಈಗಾಗಲೇ ದುನಿಯಾ ವಿಜಿ ಕ್ರೈಂ ಹಿಸ್ಟರಿ ಸಿಸಿಬಿ ಪೊಲೀಸರ ಕೈ ತಲುಪಿದೆ. ಮಾರುತಿ ಗೌಡ ಮೇಲೆ ಹಲ್ಲೆ ನಡೆಸೋ ಸಂದರ್ಭದಲ್ಲಿ ದುನಿಯಾ ವಿಜಿ ಗಾಂಜಾ ಸೇವಿಸಿದ್ದರು ಅನ್ನೋ ಶಂಕೆಯಿರೋದ್ರಿಂದ ದುನಿಯಾ ವಿಜಿ ರಕ್ತ ಮತ್ತು‌ ಮೂತ್ರ ಪರೀಕ್ಷೆ ನಡೆಸಲಾಗಿದೆ. ಗಾಂಜಾ ಸೇವಿಸಿ ಹಲ್ಲೆ ಮಾಡಿರೋದು ವೈದ್ಯರ ಪರೀಕ್ಷೆಯಿಂದ ಕನ್ಫರ್ಮ್​​ ಆದ್ರೆ ದುನಿಯಾ ವಿಜಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ದುನಿಯಾ ವಿಜಯ್‌ ಕೇಸ್ ಹಿಸ್ಟರಿಗಳು ಮತ್ತು ಈಗ ದಾಖಲಾಗಿರೋ ಹೊಸ ಪ್ರಕರಣ ಎಲ್ಲವನ್ನೂ ಒಟ್ಟು ಸೇರಿಸಿದ್ರೆ.. ಅವರ ವಿರುದ್ಧ ರೌಡಿ ಶೀಟ್ ಓಪನ್ ಮಾಡಲು ಎಲ್ಲಾ ಅವಕಾಶಗಳಿವೆ ಅಂತಿವೆ ಸಿಸಿಬಿ‌ ಮೂಲಗಳು.
Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *