Breaking News

ಕಾಂತಾರ ಸಿನಿಮಾಕ್ಕೆ ಬಿಗ್ ಶಾಕ್


ಬೆಂಗಳೂರು : ಕಾಂತಾರ ಸಿನಿಮಾ ಎಲ್ಲೆಡೆ ತನ್ನ ಹವಾ ಎಬ್ಬಿಸಿ ಬಿಟ್ಟಿದೆ. ಈ ಸಿನಿಮಾ ಹವಾ ಹೆಚ್ಚಿಸೋ ಲಕ್ಷಣ ಹೆಚ್ಚಾಗ್ತಾ ಇದೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಬಾಕ್ಸ್‌ ಆಫೀಸ್‌ನಲ್ಲಿ ಕಾಂತಾರ ಹೆಚ್ಚಿದೆ.ಈ ನಡುವೆ ಕಾಂತಾರ ಸಿನಿಮಾದ ಜನಪ್ರಿಯ ವರಾಹ ರೂಪಂ ಹಾಡು ವಿವಾದ ಆಗಿತ್ತು.

ಈ ಹಾಡನ್ನು ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್  ಅವರು ಮಲಯಾಳಂ ಭಾಷೆಯ ‘ನವರಸಂ..’ ಹಾಡಿನಿಂದ  ಇದನ್ನು ಕಾಪಿ ಮಾಡಿದ್ದಾರೆ ಎಂಬ ಆರೋಪವನ್ನು ಚಿತ್ರತಂಡ ಎದುರಿಸಿತ್ತು. ಕಾಂತಾರಾ ಸಿನಿಮಾದ ವರಾಹ ರೂಪಂ ಎನ್ನುವ ಫೇಮಸ್​ ಟ್ಯೂನ್​ ಅನ್ನು 5 ವರ್ಷ ಹಳೆಯ ಮಲಯಾಳಂ ಸಿನಿಮಾದಿಂದ ಕದ್ದಿದ್ದಾರೆ ಎಂಬ ಮಾತು ಬಂದಿತ್ತು.‌

ಈ ಕುರಿತು ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್​ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತು. ಈ ಕೇಸ್ ವಿಚಾರಣೆ ನಡೆಸಿದ ಕೇರಳದ ಕೋಝಿಕೋಡ್ ನ್ಯಾಯಾಲಯ , ವರಾಹ ರೂಪಂ ಹಾಡಿಗೆ ತಡೆಯಾಜ್ಞೆ ನೀಡಿದೆ. ಹೌದು, ಈ ವಿಚಾರವನ್ನು ‘ತೈಕ್ಕುಡಂ ಬ್ರಿಡ್ಜ್​’ ತನ್ನ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *