ಬೆಂಗಳೂರು : ಇಂದು ಅಂದರೆ ಶುಕ್ರವಾರದಂದು ಬೆಂಗಳೂರು ನಗರವು ಪ್ರಧಾನಿ ಅವರನ್ನು ಸ್ವಾಗತಿಸಲು ಸಜ್ಜಾಗುತ್ತಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಮೃದ್ಧತೆಯ ಪ್ರತೀಕ ಎನ್ನಲಾಗುವ ಸ್ಟ್ಯಾಚ್ಯೂ ಆಫ್ ಪ್ರಾಸ್ಪೆರಿಟಿಯನ್ನು ಪ್ರಧಾನಿ ಅನಾವರಣಗೊಳಿಸಲಿದ್ದಾರೆ.
ಇನ್ನು, ಈ ಪ್ರತಿಮೆಯ ಬಗ್ಗೆ ಹೇಳುವುದಾದರೆ ಒಂದೇ ಕುಟುಂಬದ ಮೂರು ತಲೆಮಾರಿನ ಶಿಲ್ಪಿಗಳು ಹಾಗೂ ಇತರೆ 200 ಶಿಲ್ಪಿಗಳು ಸತತ ಒಂಭತ್ತು ತಿಂಗಳ ಕಾಲ ಇದರ ಕೆತ್ತನೆಯಲ್ಲಿ ತೊಡಗಿದ್ದು ವಿಶೇಷ.
ಈ ಒಟ್ಟಾರೆ ಪ್ರತಿಮೆಯ ವಿನ್ಯಾಸ, ಅದರ ಕೆತ್ತನೆ ಹಾಗೂ ಇದರ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಮಾತುಕತೆಗಳನ್ನಾಡುವಂತಹ ಪ್ರಾರಂಭದಿಂದ ಅಂತ್ಯದವರೆಗಿನ ಪ್ರಕ್ರಿಯೆಯಲ್ಲಿ ಒಂದೇ ಕುಟುಂಬದ ಮೂರು ತಲೆಮಾರುಗಳು ಭಾಗಿಯಾಗಿರುವುದು ಬಲು ವಿಶೇಷ ಎನಿಸಿದೆ.
ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾದ ರಾಮ್ ವಿ ಸುತಾರ್ ಅವರು ಪ್ರತಿಮೆ ಕಾಣುವ ಬಗೆ, ಪರಿಕಲ್ಪನೆಯನ್ನು ಅಂತಿಮಗೊಳಿಸಿದರೆ ಅವರ ಸತತ ಮೇಲ್ವಿಚಾರಣೆಯಲ್ಲಿ ಪ್ರತಿಮೆಯ ಕೆತ್ತನೆ ಅಥವಾ ನಿರ್ಮಾಣದ ಕೆಲಸದ ಜವಾಬ್ದಾರಿಯನ್ನು ಅವರ ಸುಪುತ್ರರಾದ ಅನೀಲ್ ಸುತಾರ್ ಅವರು ನಿರ್ವಹಿಸಿದ್ದಾರೆ. ಇನ್ನು, ಇದರ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಸಹಯೋಗ ನಡೆಸಿಕೊಂಡು ಹಾಗೂ ಅಂತಿಮವಾಗಿ ಅದರ ಪ್ರತಿಷ್ಠಾಪನೆಯನ್ನು ಮೊಮ್ಮಗನಾದ ಸಮೀರ್ ಸುತಾರ್ ನಿರ್ವಹಿಸುವುದರ ಮೂಲಕ ಒಂದೇ ಕುಟುಂಬದ ಮೂರು ತಲೆಮಾರುಗಳು ಇದರಲ್ಲಿ ಭಾಗಿಯಾದಂತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

