Breaking News

ಧಾರವಾಡದಲ್ಲಿ ಗಮನಸೆಳೆದ ಎಮ್ಮೆ ಓಡಿಸುವ ಸ್ಪರ್ಧೆ

ಧಾರವಾಡ: ಮನರಂಜನೆಗಾಗಿ ಟಗರಿನ ಕಾಳಗ, ಚಕ್ಕಡಿ ಓಡಿಸುವ ಸ್ಪರ್ಧೆ ಹೀಗೆ ಅನೇಕ ಸ್ಪರ್ಧೆಗಳನ್ನು ಅಲ್ಲಲ್ಲಿ ಆಯೋಜನೆ ಮಾಡಲಾಗಿರುತ್ತದೆ. ಆದರೆ ಧಾರವಾಡದಲ್ಲಿ ವಿಭಿನ್ನವಾದ ಸ್ಪರ್ಧೆಯೊಂದನ್ನು ಆಯೋಜನೆ ಮಾಡಲಾಗಿತ್ತು. ಅದುವೇ ಎಮ್ಮೆ ಓಡಿಸುವ ಸ್ಪರ್ಧೆ. ಎಮ್ಮೆ ಎಂದರೆ ಕೇವಲ ಎಮ್ಮೆ ಓಡಿಸುವ ಸ್ಪರ್ಧೆಯಲ್ಲ. ಬೈಕ್ ಹಿಂದೆ ಎಮ್ಮೆ ಬೆನ್ನಟ್ಟಿಸಿಕೊಂಡು ಓಡಿಸುವ ಸ್ಪರ್ಧೆಯನ್ನು ಧಾರವಾಡದ ಗೌಳಿಗಲ್ಲಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಗೌಳಿಗಲ್ಲಿಯ ಸಾಯಿ ನಗರ ಹನುಮಂತನಗರದ ಹತ್ತಿರ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಅನೇಕರು ತಮ್ಮ ಎಮ್ಮೆಗಳ ಸಮೇತ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದರು. ಎಮ್ಮೆಗಳ ಮಾಲೀಕರು ಬೈಕ್ ತೆಗೆದುಕೊಂಡು ಮುಂದೆ ಹೋಗಿ ತಮ್ಮ ಎಮ್ಮೆಯನ್ನು ಬೆನ್ನಟ್ಟಿಸಿಕೊಂಡು ಹೋಗುವ ಮೂಲಕ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಈ ಸ್ಪರ್ಧೆ ಎಲ್ಲರ ಗಮನಸೆಳೆಯಿತು.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *