ಬೆಂಗಳೂರು:ಬಿಎಸ್ ಯಡಿಯೂರಪ್ಪ ಇಂದು ನಾಲ್ಕನೇ ಬಾರಿಗೆ ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಜೆ 6 ಗಂಟೆಗೆ ಪ್ರಮಾಣವಚನಕ್ಕೆ ಸಮಯ ನಿಗದಿಯಾಗಿದೆ. ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಯಡಿಯೂರಪ್ಪಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಲಿದ್ದಾರೆ.ಇಂದು ಬೆಳಗ್ಗೆ ಡಾಲರ್ಸ್ ಕಾಲೋನಿಯ ಬಾಲಾಂಜನೇಯ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದ ಬಿಎಸ್ ಯಡಿಯೂರಪ್ಪ ಬಳಿಕ ನೇರವಾಗಿ ರಾಜಭವನಕ್ಕೆ ತೆರಳಿದ್ರು. ಪುತ್ರ ರಾಘವೇಂದ್ರ, ಶಾಸಕರಾದ ರಘುಪತಿ ಭಟ್ ಸಹಿತ ಹಲವು ಶಾಸಕರೊಂದಿಗೆ ರಾಜ್ಯಪಾಲರನ್ನ ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ರು. ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ಸ್ವೀಕಾರಕ್ಕೆ ಬಿಎಸ್ವೈ ಬೇಡಿಕೆ ಇಟ್ಟಿದ್ದರು. ಆದ್ರೆ ಅದಕ್ಕೆ ಕೆಲವೇ ಗಂಟೆಗಳಿರುವ ಕಾರಣ ರಾಜ್ಯಪಾಲರು ಸಂಜೆ 6 ಗಂಟೆಗೆ ಪ್ರಮಾಣವಚನಕ್ಕೆ ಸಮಯ ಕೊಟ್ಟಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





