Breaking News

ಸೂಪರ್​ ಸ್ಟಾರ್​ ಕೃಷ್ಣ ನಿಧನ : ಮೋದಿ ಸಂತಾಪ


ದೆಹಲಿ : ತೆಲುಗು ಮತ್ತು ಇಂಗ್ಲಿಷ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ. ಕೃಷ್ಣ ಅವರ ಪ್ರತಿಭೆ ಮತ್ತು ವ್ಯಕ್ತಿತ್ವವನ್ನು ಮೋದಿ ಸ್ಮರಿಸಿದ್ದಾರೆ.ತೆಲುಗು ನಟ ಮಹೇಶ್​ ಬಾಬು ಅವರ ತಂದೆ ಸೂಪರ್​ ಸ್ಟಾರ್​ ಕೃಷ್ಣ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

5 ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಕೃಷ್ಣ ಘಟ್ಟಮನೇನಿ ಅವರ ಸಾಧನೆಯನ್ನು ಸ್ಮರಿಸಲಾಗುತ್ತಿದೆ. ಟಾಲಿವುಡ್​ನ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು, ಆಪ್ತರು ಕೃಷ್ಣ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸೋಶಿಯಲ್​ ಮೀಡಿಯಾ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ತೆಲುಗು ಮತ್ತು ಇಂಗ್ಲಿಷ್​ನಲ್ಲಿ ಮೋದಿ ಟ್ವೀಟ್​ ಮಾಡಿದ್ದಾರೆ. ಕೃಷ್ಣ ಅವರ ಪ್ರತಿಭೆ ಮತ್ತು ವ್ಯಕ್ತಿತ್ವವನ್ನು ಪ್ರಧಾನಿ ಸ್ಮರಿಸಿದ್ದಾರೆ.

‘ಕೃಷ್ಣ ಅವರು ಲೆಜೆಂಡರಿ ನಟನಾಗಿದ್ದರು. ತಮ್ಮ ವ್ಯಕ್ತಿತ್ವ ಮತ್ತು ನಟನೆ ಮೂಲಕ ಅವರು ಜನರ ಹೃದಯ ಗೆದ್ದಿದ್ದರು. ಅವರ ನಿಧನದಿಂದ ಸಿನಿಮಾ ಜಗತ್ತಿಗೆ ದೊಡ್ಡ ನಷ್ಟ ಆಗಿದೆ. ಈ ಕಷ್ಟದ ಸಂದರ್ಭದಲ್ಲಿ ಮಹೇಶ್​ ಬಾಬು ಮತ್ತು ಅವರ ಕುಟುಂಬದವರಿಗಾಗಿ ನನ್ನ ಪ್ರಾ​ರ್ಥನೆಗಳು. ಓಂ ಶಾಂತಿ’ ಎಂದು ನರೇಂದ್ರ ಮೋದಿ ಪೋಸ್ಟ್​ ಮಾಡಿದ್ದಾರೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *