Breaking News

ಧರ್ಮ ಜಾಗೃತಿ ಹೆಸರಲ್ಲಿ ಗ್ರಾಮಸ್ಥರ ಮತಾಂತರ ಆರೋಪ: ಎಫ್‌ಐಆರ್ ದಾಖಲು

ಕಲಬುರಗಿ ಹೊರವಲಯದ ಶರಣ ಶಿರಸಗಿ ಗ್ರಾಮದ ಜನರನ್ನು ಧರ್ಮ ಜಾಗೃತಿ ಹೆಸರಲ್ಲಿ ಮತಾಂತರ ಮಾಡಲಾಗುತ್ತಿದೆ ಎನ್ನುವ ಆರೋಪದ ಮೇಲೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಎವರ್ ಲಾಸ್ಟಿಂಗ್ ಲೈಫ್ ಫಾದರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಮಾರ್ಚ್ 8ರಂದು ಹತ್ತರಿಂದ ಇಪ್ಪತ್ತು ಜನ ಶರಣ ಸಿರಸಗಿ ಗ್ರಾಮಕ್ಕೆ ಬಂದಿದ್ದು, ಧರ್ಮ ಜಾಗೃತಿ ಹೆಸರಲ್ಲಿ ಹಿಂದೂಗಳ ಮನೆಗಳಿಗೆ ತೆರಳಿ ಯೇಸು ಕ್ರಿಸ್ತ ನಿಮ್ಮ ಯಾವುದೇ ಸಮಸ್ಯೆ ಬಗೆಹರಿಸುತ್ತಾನೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೆ ಹಣ ಸಿಗುತ್ತದೆ. ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸಹಾಯ ದೊರೆಯುತ್ತದೆ ಎಂಬ ಕರಪತ್ರಗಳನ್ನು ಹಂಚಿ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *