Breaking News

ಕರಳುಬಳ್ಳಿ ಹೊತ್ತು ಹೆಂಡತಿ ಸಾವು ಕಂಡ ಗಂಡ ಆತ್ಮಹತ್ಯೆಗೆ ಶರಣು



ಪುಣೆ( ಮಹಾರಾಷ್ಟ್ರ): ​ಆಸ್ಪತ್ರೆಗೆ ಗಂಡನ ಜೊತೆಗೆ ತಿಂಗಳ ಚಿಕಿತ್ಸೆಗೆ ಬಂದ ಮಹಿಳೆ ರಸ್ತೆ ಅಪಘಾತದಲ್ಲಿ ದಾರುಣ ಸಾವು ಕಂಡಿದ್ದರು. ಕಣ್ಣೇದುರೇ ಕರಳುಬಳ್ಳಿ ಹೊತ್ತು ಹೆಂಡತಿ ಸಾವು ಕಂಡ ಗಂಡ, ಈ ದುಃಖದಿಂದ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಪುಣೆಯಲ್ಲಿ ನಡೆದಿದೆ.

ದೊಂಡಕರ್ವಾಡಿಯ ರಮೇಶ್​ ನವ್ನಾಥ್​​ ಕನ್ಶಕರ್​ (29) ಸಾವನ್ನಪ್ಪಿದ ವ್ಯಕ್ತಿ. ಕಳೆದ ಎಂಟು ತಿಂಗಳ ಹಿಂದೆ ರಮೇಶ್ ವಿದ್ಯಾ ಎಂಬಾಕೆಯನ್ನು ವಿವಾಹವಾಗಿದ್ದರು. ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಕಳೆದ ವಾರ ಇಲ್ಲಿನ ನಾರಾಯಣ ಗಾಂವ್​ ಆಸ್ಪತ್ರೆಗೆ ತಿಂಗಳ ಚಿಕಿತ್ಸೆಗೆ ಬಂದಿದ್ದರು. ಚಿಕಿತ್ಸೆ ಮುಗಿಸಿ ಗಂಡನ ಜೊತೆ ಮನೆಗೆ ಮರಳುತ್ತಿದ್ದ ವೇಳೆ ಅವರ ಬೈಕ್ ಟ್ರಾಕ್ಟರ್​ ಮುಖಾಮುಖಿಯಾಗಿದೆ.

ಇದರ ಪರಿಣಾಮವಾಗಿ ಪತ್ನಿ ಬೈಕ್​ನಿಂದ ಬಿದ್ದಿದ್ದಾಳೆ. ಈ ವೇಳೆ ಆಕೆ ತಲೆ ಟ್ರಾಕ್ಟರ್​ ಹರಿದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಕಣ್ಣಾರೆ ಕಂಡ ರಮೇಶ್​ ಶಾಕ್​ಗೆ ಒಳಗಾಗಿದ್ದು, ಒತ್ತಡಕ್ಕೆ ಒಳಗಾಗಿದ್ದಾರೆ. ಕಡೆಗೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಇನ್ನು ನಗರದ ಕಿರಿದಾದ ಮತ್ತು ಕೆಟ್ಟ ರಸ್ತೆಗಳಿಂದಾಗಿ ಈ ಸಾವು ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *