Breaking News

ನಾಗರಬೆಟ್ಟ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ರೀತಿಯಲ್ಲಿ ಸಾವು


ವಿಜಯಪುರ : ನಾಗರಬೆಟ್ಟ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಗರಬೆಟ್ಟದ ಎಕ್ಸ್‌ಪರ್ಟ್ ವಸತಿ ಶಾಲೆಯಲ್ಲಿ ಘಟನೆ ನಡೆದಿದ್ದು, ಅಜಯಕುಮಾರ್ ವಿರುಪಾಕ್ಷಿ ನುಚ್ಚಿ (18) ಮೃತಪಟ್ಟ ವಿದ್ಯಾರ್ಥಿ.

ವಿಜಯಪುರ ನಗರದ ಇಬ್ರಾಹಿಮಪುರ ಮೂಲದ ವಿದ್ಯಾರ್ಥಿ ನಾಗರಬೆಟ್ಟದ ಆಕ್ಸ್‌ಫರ್ಡ್ ವಸತಿ ಶಾಲೆಯಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.

ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಳೆದ ಮೂರು ದಿನದ ಹಿಂದೆ ಬಾಲಕನಿಗೆ ಅದೆ ಶಾಲೆಯ ಮುಖ್ಯಸ್ಥರ ಮಗನಿಗೆ ಜಗಳ ನಡೆದಿತ್ತು ಎನ್ನುವ ಮಾಹಿತಿ ಲಭ್ಯವಾಗಿದ್ದು, ಈಗ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಇನ್ನು ವಸತಿ ಶಾಲೆಯ ಕಟ್ಟಡದಲ್ಲಿಯೇ ಬಾಲಕನ ಶವ ಸಿಕ್ಕಿದ್ದು, ಹಲವು ಅನುಮಾನ ಹುಟ್ಟಿಸಿದೆ. ಇನ್ನು ವಸತಿ ಶಾಲೆಯ ಮಕ್ಕಳಲ್ಲಿ ಭಯ ಆವರಿಸಿದ್ದು, ಮುದ್ದೇಬಿಹಾಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *