ಭೋಪಾಲ್: ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ವೇಳೆ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಬಿಜೆಪಿ ನಾಯಕರು ಮಧ್ಯಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪಿಯೂಷ್ ಬಾಬೆಲೆ ಮತ್ತು ಐಟಿ ಮುಖ್ಯಸ್ಥ ಅಭಯ್ ತಿವಾರಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಿಜೆಪಿಯ ಮಧ್ಯಪ್ರದೇಶದ ರಾಜ್ಯ ವಕ್ತಾರ ಪಂಕಜ್ ಚತುರ್ವೇದಿ ಮತ್ತು ರಾಜ್ಯ ಸಹ ಮಾಧ್ಯಮ ಉಸ್ತುವಾರಿ ನರೇಂದ್ರ ಶಿವಾಜಿ ಪಟೇಲ್ ಅವರು ಅಪರಾಧ ವಿಭಾಗಕ್ಕೆ ನೀಡಿದ ದೂರಿನಲ್ಲಿ ಭಾರತ್ ಜೋಡೋ ಯಾತ್ರೆಯ ನೆಪದಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಮಲ್ ನಾಥ್ ಮತ್ತು ಇಡೀ ಕಾಂಗ್ರೆಸ್ ಪಕ್ಷವು ದೇಶದಲ್ಲಿ ರಾಷ್ಟ್ರ ವಿರೋಧಿ ಸಂಘಟನೆಯನ್ನು ಮಾಡುತ್ತಿದೆ. ಯಾತ್ರೆಯಲ್ಲಿ ದೇಶದ ಶಾಂತಿ ಕದಡಲು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

