ಹುಬ್ಬಳ್ಳಿ :ಅಲ್ಪ ಸಂಖ್ಯಾತ ಮತದಾರರು ಹೆಚ್ವಿರುವ ಕ್ಷೇತ್ರಗಳಲ್ಲಿ ಆ್ಯಪ್ಮೂಲಕ ಸರ್ವೆ ಮಾಡುತ್ತಿದ್ದ ಮೂವರನ್ನು ಕಾಂಗ್ರೆಸ್ ಮುಖಂಡರು ಹಿಡಿದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ನಡೆದಿದೆ.

ಅಲ್ಪಸಂಖ್ಯಾತ ಮತದಾರಿರುವ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಹಾಗೂ ಪಶ್ಚಿಮ ಮತದಾರರಿರುವ ಹುಬ್ಬಳ್ಳಿಯ ಆನಂದ್ ನಗರದಲ್ಲಿ ಮೂವರು ಸರ್ವೆ ನಡೆಸುತ್ತಿದ್ದರು. ಆಗ ಅನುಮಾನ ಬಂದ ಕೂಡಲೇ ಕಾಂಗ್ರೆಸ್ ಮುಖಂಡರಾದ ರಜತ್ ಉಳ್ಳಾಗಡ್ಡಿಮಠ ಹಾಗೂ ಆರೀಪ್ ಭದ್ರಾಪುರ ಅವರು ಸರ್ವೆ ಮಾಡುತ್ತಿದ್ದವರನ್ನು ವಿಚಾರಿಸಿದ್ದಾರೆ. ಆಗ ಸಮರ್ಪಕ ಉತ್ತರ ನೀಡದಿದ್ದಾಗ. ಸರ್ವೆ ಮಾಡುತ್ತಿದ್ದ ಹರೀಶ್,ನಿತೇಶ್,ಮಂಜುನಾಥ್ ರನ್ನು ಹಿಡಿದು ಹಳೇ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.


ಚಿಲುಮೆ ಮಾದರಿಯಲ್ಲಿ ಮಾಹಿತಿ ಸಂಗ್ರಹ ಆರೋಪ..
ಈ ಸರ್ವೆ ತಂಡ ASR ಕನ್ಸಲ್ಟಿಂಗ್ ಸರ್ವಿಸ್ ಪ್ರೈವೆಟ್ ಲಿಮಿಟೆಡ್ ನಿಂದ ಅನುಮತಿ ಪಡೆದಿದೆ. ಪ್ರಿ ಪೋಲ್ ಸರ್ವೆ ಮಾಡೋದಾಗಿ ಹುಬ್ಬಳ್ಳಿ ಧಾರವಾಡ ಕಮೀಷನರ್ ಅವರಿಂದ ಸ್ವೀಕೃತಿ ಪತ್ರ ಪಡೆದುಕೊಂಡಿದೆ. ಇದೊಂದು ಚಿಲುಮೆ ಮಾದರಿಯ ಪ್ರಕರಣ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.ಇದು ಅಲ್ಪ ಸಂಖ್ಯಾತ ಮತಗಳ ಡಿಲೀಟ್ ಮಾಡೋ ಹುನ್ನಾರವಿದೆ. ಬಿಜೆಪಿ ನಾಯಕರು ಸೋಲಿನ ಭಯದಿಂದ ಸರ್ವೆ ಮಾಡಸ್ತೀದಾರೆ.ಈ ಬಗ್ಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುವಂತೆ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

