Breaking News

ಬೈಕ್‌ನಿಂದ‌ ಇಳಿಯುವಾಗ ಪ್ರಶ್ನೆ ಮಾಡಿದ ವ್ಯಕ್ತಿಯನ್ನೇ ಕೊಂದ ಕೀಚಕರು

ಧಾರವಾಡ : ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ್ ಗ್ರಾಮದಲ್ಲಿ ಘಟನೆ ನಡೆದಿದೆ.

ಧಾರವಾಡ ಸಾಮಾನ್ಯವಾಗಿ ನಾವು ನೀವು ಇತ್ತಿಚಿನ ದಿನಗಳಲ್ಲಿ ಕೊಲೆಗಳು ಚಿಕ್ಕ‌ ಚಿಕ್ಕ ವಿಷಯಕ್ಕೆ ಕೊಲೆ ಆಗುತ್ತಿವೆ ಎಂಬುದನ್ನ ನೋಡಿದ್ದೇವೆ ಖಂಡಿದ್ದೇವೆ. ಸಿಗರೇಟ್ ವಿಚಾರವಾಗಿ, ಅನೇಕ ವಿಚಾರವಾಗಿ, ಕೇವಲ ಹತ್ತು ರೂಪಾಯಿ ಕೊಡುವುದರ ವಿಚಾರವಾಗಿ ಹಲ್ಲೆ ಮಾಡಿ‌ ಕೊಲೆಗಳು ಆಗಿವೆ. ಆದರೆ ವಿದ್ಯಾಕಾಶಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ್ ಗ್ರಾಮದಲ್ಲಿ ಕೇವಲ ಬೈಕ್ ನಿಂದ ಇಳಿಯುವಾಗ ನೋಡಿಕೊಂಡು ಕೆಳಗೆ ಇಳಿರಿ ಎಂದು ಪ್ರಶ್ನೆ ಮಾಡಿದ ಸಂಗನಗೌಡ್ರು ಮುದಿಗೌಡ್ರು(50) ಇವರನ್ನ ನನಗೆ ಪ್ರಶ್ನೆ ಮಾಡ್ತಿಯಾ ಎಂದು ಹಿಗ್ಗಾ‌ಮುಗ್ಗಾ ಥಳಿಸಿ 6 ಜನರು ಸೇರಿಕೊಂಡು ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಬೈಕ್ ನಿಂದ ಇಳಿಯುವಾಗ ಕಾಲು ಬಡಿದಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಅದೆ ಗ್ರಾಮದ ಆರೋಪಿಗಳಾದ ಈರಪ್ಪ ಕಿತ್ತಲಿ, ಪಕ್ಕಿರಪ್ಪ ಕಿತ್ತಲಿ, ಬಸವರಾಜ ಕಿತ್ತಲಿ, ಮಂಜುನಾಥ್ ಕಿತ್ತಲಿ, ನಾಗರಾಜ ಕಿತ್ತಲಿ, ಬಸವರಾಜ ಕುರುಗೋವಿನಕೊಪ್ಪ ಸೇರಿ ಒಟ್ಟು 6 ಜನರು‌ ಸೇರಿ ಹಲ್ಲೆ ಮಾಡಿ ಹತ್ಯೆ ಮಾಡಿ ಕೊಲೆ ಮಾಡಿದ್ದಾರೆ. ಸದ್ಯ 6 ಜನರ ಮೇಲೆ‌ ನವಲಗುಂದ ಪೋಲಿಸರು ಪ್ರಕರಣ ದಾಖಲಿಸಿಕೊಂಡು 6 ಜನ‌ ಆರೋಪಿಗಳನ್ನ ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *