Breaking News

ಏಜೆನ್ಸಿಗಳಿಗೆ ಮತದಾರರ ಸಮೀಕ್ಷೆ ಮಾಡಲು ಅನುಮತಿ ನೀಡಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

ಹುಬ್ಬಳ್ಳಿ: ನಿನ್ನೆಯಷ್ಟೇ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮತದಾರರ ಮಾಹಿತಿ ಸಂಗ್ರಹದ ಕುರಿತು ಎಫ್‌ಐಆರ್ ದಾಖಲಾಗಿದೆ. ಏಜೆನ್ಸಿಯವರು ಮತದಾರ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ ಎಂದು ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಹೇಳಿದರು.

ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೆಲವು ಮುಖಂಡರು ಮಾಹಿತಿ ಸಂಗ್ರಹದಿಂದ ಮತದಾರರ ಹೆಸರು ಡಿಲೀಟ್ ಆಗುವ ಚಾನ್ಸ್ ಇದೆ ಎಂದು ದೂರು ನೀಡಿದ್ದರು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 3 ಜನರ ವಿರುದ್ಧ ದೂರು ದಾಖಲಾಗಿದೆ. ಈ ಕುರಿತು ಇಲೆಕ್ಷನ್ ಕಮೀಷನ್‌ನಿಂದ ನಮಗೆ ವರದಿ ಕೇಳಿದ್ದರು. ಹೀಗಾಗಿ ನಾನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದೇನೆ. ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದೇನೆ ಎಂದರು.

ನಮ್ಮ ಜಿಲ್ಲೆಯಲ್ಲಿ 99 ಸಾವಿರ ವೋಟರ್ ಡಿಲೀಟ್ ಆಗಿವೆ. ಅದಕ್ಕೆ ಕಾರಣ ಡುಪ್ಲಿಕೇಟ್ ವೋಟರ್ಸ್, ಒಂದೇ ಕ್ಷೇತ್ರ ಮತ್ತೊಂದು ಕ್ಷೇತ್ರದಲ್ಲಿ ಅವರ ಹೆಸರು ಇರಬಹುದು. ಅದನ್ನು ಚೆಕ್‌ಮಾಡಿ 47 ಸಾವಿರ ವೋಟರ್ಸ್ ಡುಪ್ಲಿಕೇಟ್ ಇರೋ ಕಾರಣ ಡಿಲೀಟ್ ಆಗಿವೆ. ಕೆಲವರು ಮೃತರಾದವರ ಹೆಸರು ಡಿಲೀಟ್ ಆಗಿವೆ. ಕೆಲವರು ಸ್ಥಳಾಂತರ ಹೆಸರು ಡಿಲೀಟ್ ಆಗಿವೆ.. ಹೀಗಾಗಿ ಧಾರವಾಡ ಜಿಲ್ಲೆಯಲ್ಲಿ 99 ಸಾವಿರ ಮತಗಳು ಡಿಲೀಟ್ ಆಗಿವೆ. ಇದನ್ನು ನಾವೇ ರಾಜಕೀಯ ಪಕ್ಷಗಳಿಗೆ ನೀಡಿದ್ದೇವೆ ಎಂದರು.

ತಪ್ಪಾಗಿ ಯಾರಾದರೂ ಡಿಲೀಟ್ ಆಗಿದ್ದರೆ ಅಂತವರ ಹೆಸರು ಕೊಡಿ. ನಾವು ಅದನ್ನು ಸರಿ ಮಾಡುತ್ತೇವೆ. ಏಜೆನ್ಸಿಗಳಿಗೆ ಯಾವುದೇ ಅನುಮತಿ ನೀಡಿಲ್ಲ. ಏಜೆನ್ಸಿ ಅವರು ಸ್ವತಂತ್ರ್ಯವಾಗಿ ಸಮೀಕ್ಷೆ ಮಾಡುತ್ತಿದ್ದಾರೆ. ನಾವು ಡಿಟೇಲ್ ರಿಪೋರ್ಟ್ ಇಲೆಕ್ಷನ್ ಕಮೀಷನ್‌ಗೆ ಒಪ್ಪಿಸುತ್ತೇವೆ. ತನಿಖೆಯಾದ ಬಳಿಕ ಇವರ ಹೊರತಾಗಿ ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *