Breaking News

ವಾಣಿಜ್ಯ ಇಲಾಖೆಯ 18 ಅಧಿಕಾರಿಗಳ ಏಕಕಾಲಕ್ಕೆ ಸೇವೆಯಿಂದ ಅಮಾನತು


ಬೆಂಗಳೂರು: ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಇಲಾಖೆಯ ಜಂಟಿ ಆಯುಕ್ತರು, ಮೂವರು ಸಹಾಯಕ ಆಯುಕ್ತರು ಸೇರಿದಂತೆ 18 ಅಧಿಕಾರಿಗಳನ್ನು ಏಕಕಾಲಕ್ಕೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಅತಿಹೆಚ್ಚು ವರಮಾನ ತರುವ ವಾಣಿಜ್ಯ ಇಲಾಖೆಯ ಅಧಿಕಾರಿಗಳನ್ನು ಏಕಕಾಲಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಮಾನತು ಮಾಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

ಸವಿತಾ-ಜಂಟಿ ಆಯುಕ್ತರು, ಮೈಸೂರು, ಶ್ರೀರಂಗಪ್ಪ, ಸಹಾಯಕ ಆಯುಕ್ತ (ಎಸಿ), ಚಳ್ಳಕೆರೆ, ಕೇಶವಮೂರ್ತಿ-ಎಸಿ, ಮಡಿಕೇರಿ, ಉಮಾದೇವಿ-ಎಸಿ, ದೇವನಹಳ್ಳಿ, ಮೈಸೂರಿನ ವಾಣಿಜ್ಯ ತೆರಿಗೆ ಅಕಾರಿಗಳಾದ ನಳಿನಾಕುಮಾರಿ ಮತ್ತು ಗಾಯತ್ರಿ ಎನ್.ಟಿ. ಜಯರಾಮ್.ಎಸ್, ಜನಾರ್ಧನ್.ಆರ್, ಅಪ್ಪು ಪೂಜಾರಿ -ಎಟಿ, ಸಿಐಟಿ ಸಿ.ಎನ್.ಪಾಟೀಲ್-
ವಾಣಿಜ್ಯ ತೆರಿಗೆ ನಿರೀಕ್ಷಕರು (ಸಿಟಿಐ), ಬೆಳಗಾವಿ, ವಾಸುದೇವ್ ಎಚ್.ಎಸ್-ಸಿಟಿಐ, ಮಡಿಕೇರಿ, ಯೋಗಾನಂದ್.ಕೆ- ಸಿಟಿಐ ಮೈಸೂರು, ರಂಗಸ್ವಾಮಿ ಆರ್.ವಿಜಯಕುಮಾರ್.ಜೆ-ಸಿಟಿಐ ಚಿತ್ರದುರ್ಗ, ಬೆಂಗಳೂರಿನ ಸಿಟಿಐಗಳಾದ ಶ್ರೀಧರ್.ಎಸ್, ದಿನೇಶ್.ಎಸ್, ಉಮೇಶ್.ಆರ್ ಮತ್ತು ಧನರಾಜ್ ಎಂ.ಕೆ, ಪ್ರಥಮ-ವಿಭಾಗ ಸಹಾಯಕ, ಮಡಿಕೇರಿ ಇವರುಗಳನ್ನು ಅಮಾನತುಪಡಿಸಲಾಗಿದೆ.

ಕಳೆದ ಹಲವು ತಿಂಗಳಿನಿಂದ ಈ ಅಧಿಕಾರಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಇವರ ಮೇಲೆ ಶಿಸ್ತುಕ್ರಮ ಜರುಗಿಸಬೇಕೆಂದು ಇಲಾಖೆಯ ಮುಖ್ಯಸ್ಥರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಲವು ಉದ್ಯಮಿಗಳು ಪತ್ರ ಬರೆದಿದ್ದರು ಎನ್ನಲಾಗಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *