Breaking News

ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನರಿತು ಕೆಲಸ ಮಾಡಬೇಕು : ಮಲ್ಲಿಕಾರ್ಜುನ ಖರ್ಗೆ

ಪಿಟಿಐ ನವದೆಹಲಿ : ಕಾಂಗ್ರೆಸ್‌ ಪಕ್ಷದ ಪ್ರಮುಖ ಹುದ್ದೆಗಳಲ್ಲಿರುವ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನರಿತು ಕೆಲಸ ಮಾಡಬೇಕು. ಇಲ್ಲವೇ ಹುದ್ದೆ ಬಿಟ್ಟು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್‌ ಸೂಚನೆ ನೀಡಿದ್ದಾರೆ.

ತಾವು ಎಐಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಒಂದು ತಿಂಗಳ ನಂತರ ಇದೇ ಮೊದಲ ಬಾರಿ ಭಾನುವಾರ ಪಕ್ಷದ ಚಾಲನಾ ಸಮಿತಿಯ ಸಭೆ ನಡೆಸಿದ ಅವರು, ಪಕ್ಷದ ಪ್ರಮುಖ ಹುದ್ದೆಗಳಲ್ಲಿರುವವರಿಗೆ ಎರಡು ಮುಖ್ಯ ಟಾಸ್‌್ಕಗಳನ್ನು ನೀಡಿದ್ದಾರೆ.

2024ರೊಳಗೆ ವಿಧಾನಸಭೆ ಚುನಾವಣೆಯಿರುವ ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು ಮುಂದಿನ 30ರಿಂದ 90 ದಿನಗಳ ಒಳಗೆ ಜನರಿಗೆ ಸಂಬಂಧಪಟ್ಟವಿಚಾರಗಳನ್ನಿಟ್ಟುಕೊಂಡು ರೂಪಿಸುವ ಬೃಹತ್‌ ಆಂದೋಲನಗಳ ಕುರಿತು ನೀಲನಕ್ಷೆ ರೂಪಿಸಿ 15ರಿಂದ 30 ದಿನದೊಳಗೆ ತಮ್ಮ ಜೊತೆ ಚರ್ಚಿಸಬೇಕು.

ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿಗಳು ತಿಂಗಳಿಗೆ ಕನಿಷ್ಠ 10 ದಿನವಾದರೂ ತಮಗೆ ಸಂಬಂಧಪಟ್ಟರಾಜ್ಯಗಳಲ್ಲಿ ಪ್ರವಾಸ ಮಾಡಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಹೋರಾಟ ರೂಪಿಸಲು ಕಾರ್ಯತಂತ್ರ ಹೆಣೆಯಬೇಕು ಎಂದರು.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *