ಹುಬ್ಬಳ್ಳಿ : ಒಂದು ಇರುವೆ ಸಹ ಸಾಯಿಸಲು ಸಹ ಬಿಡದ ವಿಶ್ವಕ್ಕೆ ಶಾಂತಿ ಮಂತ್ರ ಕೋರಿದ ಜೈನ್ ಸಮುದಾಯವೇ ತಲೆ ತಗ್ಗಿಸುವಂತೆ, ನಾಗರಿಕ ಸಮಾಜವೇ ನಾಚುವಂತೆ ಸ್ವತಃ ತಂದೆಯೇ ಹೆತ್ತ ಮಗನನ್ನು ಕೊಂದ ಪ್ರಕರಣ ಅಂತಿಮ ಘಟ್ಟ ತಲುಪಿದೆ. ಮಣ್ಣಿನಲ್ಲಿ ಮುಚ್ಚಿಟ್ಟ ಶವದ ಜೊತೆಗೆ ಸತ್ಯವನ್ನು ಹೊರೆಳೆದ ಪೊಲೀಸರು, ಅಂತಿಮ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಮಗನನ್ನು ಕಳೆದುಕೊಂಡ ತಾಯಿ ತನ್ನ ಗಂಡ ಹೇಳಿದ ಸುಳ್ಳನ್ನು ಸತ್ಯವೆಂದು ನಂಬಿ, ಇನ್ನೂ ಬಾರದ ಮಗನ ದಾರಿ ಕಾಯುತ್ತಿದ್ದಾಳೆ.

ಹುಬ್ಬಳ್ಳಿಯ ಖ್ಯಾತ ಉದ್ಯಮಿ ಭರತ್ ಜೈನ್ ,
ಮಾತು ಕೇಳದ ಮತ್ತು ದುಶ್ಚಗಳ ದಾಸನಾಗಿದ್ದ ಮಗ ಅಖಿಲ್ ಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಅಂತಿಮ ಹಂತ ತಲುಪಿದ್ದಾರೆ. ತಂದೆಯೆ ಕೊಲೆ ಮಾಡಿಸಿರುವುದನ್ನು ಕಂಡು ಹಿಡಿದ ಕೇಶ್ವಾಪುರ ಪೊಲೀಸರು, ಹಂತಕರು ಶವನನ್ನು ಕಲಘಟಗಿಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಶವ ಮುಚ್ಚಿಟ್ಟಿದ್ದನ್ನು ಸಹ ಪತ್ತೆ ಮಾಡಿದ್ದರು. ಅದರಂತೆ ಇಂದು ಸಹಾಯಕ ಆಯುಕ್ತ ಅಶೋಕ್ ತೆಲಿ, ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲ ಬ್ಯಾಕೋಡ ನೇತೃತ್ವವನ್ನು ಶವ ಹೊರ ತಗೆಯಲಾಗಿದ್ದು, ಮರಣೋತ್ತರ ಶವ ಪರೀಕ್ಷೆ ನಡೆಸಲಾಗಿದೆ.ಭರತ್ ಜೈನ್ ಜೊತೆಗೆ ಸುಪಾರಿ ಪಡೆದ ಹಂತಕರಿಂದ ಸ್ಥಳ ಮಹಜರು ಸಹ ಮಾಡಲಾಗಿದೆ.ಇನ್ನೂ ಅಖಿಲ್ ಕೊಲೆಗೆ ಹಂತಕರು ರೂಪಿಸಿದ್ದ ಮಾಸ್ಟರ್ ಪ್ಲಾನ್ ಗೆ ಅವರ ತಂದೆ ಸೂತ್ರದಾರನಾಗಿದ್ದು, ಮನೆಯಿಂದ ಮಗನನ್ನು ಕರೆದುಕೊಂಡು ಬಂದ ಭರತ್ ಹಂತಕರಿಗೆ ಒಪ್ಪಿಸಿರುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ..

ಭರತ್ ಜೈನ್ ಹುಬ್ಬಳ್ಳಿಯ ನಗರದಲ್ಲಿ ಮಹಾವೀರ ಕಟ್ಟಡ ನಿರ್ಮಾಣ ಸಾಮಗ್ರಿಗಳ ಮಾರಾಟ ಏಜೆನ್ಸಿ ಹೊಂದಿದ್ದರು. ಇವರ ಒಬ್ಬನೇ ಮಗ ಸದ್ಯ ಕೊಲೆಯಾಗಿರುವ ಅಖಿಲ್ ದುಶ್ಚಟಗಳಿಗೆ ದಾಸನಾಗಿದ್ದು, ಮನೆಯವರ ಮಾತು ಕೇಳದಷ್ಟು ಹದ್ದುಮಿರಿದ್ದ. ಇದರಿಂದಾಗಿ ಭರತ್ ಸಮಾಜದಲ್ಲಿ ತಲಗ್ಗಿಸುವಂತಾಗಿದ್ದು, ಹೀಗಾಗಿ ತೀವ್ರವಾಗಿ ಮನನೊಂದಿದ್ದ ಭರತ್.. ರೆಹಮಾನ್ ಬಿಜಾಪುರ,ಮಹಾದೇವ ನಾಲ್ವಾಡ ,ಸಲೀಂ ಸಲಾವುದ್ದಿನ್ ಎಂಬುವವರಿಗೆ ತನ್ನ ಮಗನ ಕೊಲೆಗಾಗಿ ಹತ್ತು ಲಕ್ಷಕ್ಕೆ ಸುಪಾರಿ ಕೊಡಲು ಮುಂದಾಗಿದ್ದರು. ಕೊಲೆ ಮಾಡಲು ಒಪ್ಪಿಕೊಂಡಿದ್ದ ಹಂತಕರು, ಧಾರವಾಡ ಜಿಲ್ಲೆಯ ಕಲಘಟಗಿ ಹೊರ ವಲಯದ ರೆಹಮಾನ್ ಬಿಜಾಪುರ ಸಂಬಂಧಿ ಕಬ್ಬಿನ ಗದ್ದೆಯಲ್ಲಿ ಅಖಿಲ್ ಕೊಲೆಗೆ ಸಂಚು ರೂಪಿಸಿದ್ದರು. ಆದರೆ ಕಲಘಟಗಿಗೆ ಅಖಿಲ್ ಕರೆತರುವ ಜವಾಬ್ದಾರಿ ಮಾತ್ರ ಅವರ ತಂದೆಗೆ ವಹಿಸಿದ್ದರು.

ಪ್ಲಾನ್ ನಂತೆ ಡಿಸೆಂಬರ್ 1 ರಂದು ಮಧ್ಯಾಹ್ನ ಊಟಕ್ಕೆಂದು ಆರೋಪಿ ರೆಹಮಾನ್ ಜೊತೆಗೆ ಮನೆಗೆ ತೆರಳಿ ಭರತ್, ಊಟದ ಬಳಿಕ ಅಖಿಲ್ ನನ್ನು ಕರೆದು, ಕಲಘಟಗಿಯಲ್ಲಿ ಒಂದು ಡಾಬಾ ನಿರ್ಮಾಣ ಮಾಡುವ ಸಲುವಾಗಿ ಒಂದಿಷ್ಟು ಸಾಮಗ್ರಿಗಳ ಪೂರೈಕೆಗೆ ಆರ್ಡರ್ ಬಂದಿದ್ದು, ನೋಡಿಕೊಂಡು ಬರೋಣ ಅಂತ ಕರೆದಿದ್ದಾರೆ. ತಂದೆಯ ಮಾತಿಗೆ ಒಪ್ಪಿಕೊಂಡ ಅಖಿಲ್ ತನ್ನದೇ ಕಾರ್ ನಲ್ಲಿ ತಂದೆ ಮತ್ತು ಹಂತಕನನ್ನು ಕೂರಿಸಿಕೊಂಡು, ಕಲಘಟಗಿ ಬಳಿಯ ಕಬ್ಬಿನ ಗದ್ದೆಗೆ ಬಂದಿದ್ದಾರೆ. ಗದ್ದೆಯಲ್ಲಿರುವ ಒಂದು ನಿರ್ಮಾಣ ಹಂತ ಟಿನ್ ಶೆಡ್ ತೋರಿಸಿ ಇದಕ್ಕೆ ಪಿಓಪಿ ಮಾಡಬೇಕು ಅಂತ ನಾಟಕ ಮಾಡಿ ಗದ್ದೆಯ ಒಳಗಡೆ ಕರೆದುಕೊಂಡು ಹೋಗಿದ್ದಾರೆ. ಪ್ಲಾನ್ ನಂತೆ ಮಗನನ್ನು ಒಳಗೆ ಕಳುಹಿಸಿದ ಭರತ್ ತಾನು ಹೊರಗಡೆ ಬಂದು ಕಾರ್ ತೆಗೆದುಕೊಂಡು ಮತ್ತೆ ವಾಪಸು ಹುಬ್ಬಳ್ಳಿಗೆ ತೆರಳಿದ್ದಾರೆ.

ಅತ್ತ ಭರತ್ ಹುಬ್ಬಳ್ಳಿಗೆ ತೆರಳುತ್ತಿದ್ದಂತೆ ಇತ್ತ ಹಂತಕರು ಅಖಿಲ್ ಗೆ ಹಿಂದೆಯಿಂದ ಅಟ್ಯಾಕ್ ಮಾಡಿ, ಹಗ್ಗದಿಂದ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಶವರ ಪೋಟೋವನ್ನು ಭರತ್ ಗೆ ಕಳುಹಿಸಿ, ಶವವನ್ನು ಗದ್ದೆಯಲ್ಲಿಯೇ ಬಿಟ್ಟು ವಾಪಸು ಹುಬ್ಬಳ್ಳಿಗೆ ಬಂದು ಹತ್ತು ಲಕ್ಷ ಹಣಪಡೆದುಕೊಂಡಿದ್ದಾರೆ. ಬಳಿಕ ಗದ್ದೆಗೆ ತೆರಳಿ ಉಪ್ಪು ಮತ್ತು ವಾಸನೆ ಬಾರದಿರುವಂತೆ ವಿವಿಧ ಕೆಮಿಕಲ್ ಹಾಕಿ ಶವ ಮುಚ್ಚಿದ್ದಾರೆ. ಇನ್ನೂ ಮಗನ ಸಾವಿನ ಸುದ್ದಿ ತಿಳಿದ ಭರತ್ ಪೊಲೀಸ್ ಠಾಣೆಗೆ ತೆರಳಿ ಮಗನ ಮಿಸ್ ಆಗಿದ್ದಾನೆ ಅಂತ ದೂರು ದಾಖಲಿಸಲು ಮುಂದಾಗಿ, ತಾನೆ ಹೆಣದ ಬಲೆಯಲ್ಲಿ ಸಿಕ್ಕು ಈಗ ಹಂತಕರ ಜೊತೆಗೆ ಕಂಬಿ ಹಿಂದೆ ತೆರಳಿದ್ದಾನೆ.
ಒಟ್ಟಿನಲ್ಲಿ ಹೆತ್ತ ಮಗನನ್ನೇ ಕೊಲೆಗಡುಕರ ಒಪ್ಪಿಸಿದ ಭರತ್ ಜೈನ್ ಮನನೊಂದು ಕೊಳ್ಳಲು ಅಸಲಿ ಕಾರಣವೇನು.. ಇದರ ಹಿಂದೆ ಬೇರೆ ಯಾವುದಾದರೂ ಬಲವಾದ ಕಾರಣ ಇರೋ ಬಗ್ಗೆ ಪೊಲೀಸರು ಈಗ ತಲೆ ಕಡೆಸಿಕೊಂಡಿದ್ದಾರೆ. ಅತ್ತ ತಾನು ಮಾಡಿದ ತಪ್ಪಿ ಅರಿವಾಗಿ ತಂದೆ ಪೊಲೀಸ್ ಠಾಣೆಯಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೆ ಅಖಿಲ್ ತಾಯಿಗೆ ಇದ್ಯಾವುದು ಇನ್ನೂ ಗೊತ್ತೆಇಲ್ಲ.. ಆಕೆ ಇನ್ನೂ ತನ್ನ ಗಂಡ ಹಾಡಿದ ನಾಟಕವನ್ನು ನಂಬಿ ಮಗ ಬರತ್ತಾನೆ ಅಂತ ಕಾಯುತ್ತಾ ಕುಳಿತ್ತಿದ್ದಾಳೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

