Breaking News

ಬೀದಿ ಬದಿ ವ್ಯಾಪಾರಸ್ಥರ ಅತಿಕ್ರಮಣ ತೆರವು ಹೆಸರಿನಲ್ಲಿ ಬೇಕಾಬಿಟ್ಟಿ ಎತ್ತಂಗಡಿ

ಹುಬ್ಬಳ್ಳಿ: ಬೀದಿ ಬದಿ ವ್ಯಾಪಾರಸ್ಥರು ಬದಕುವ ಹಕ್ಕನ್ನು ಹೊಂದಿದ್ದು, ಅತಿಕ್ರಮಣ ತೆರವು ಹೆಸರಿನಲ್ಲಿ ಬೇಕಾಬಿಟ್ಟಿ ಎತ್ತಂಗಡಿ ಮಾಡಲಾಗುತ್ತಿದೆ ಎಂದು ನೆಟವರ್ಕ್ ಅಸೋಸಿಯೇಷನ್ ಸ್ಟ್ರೀಟ್ ಆಫ್ ಕರ್ನಾಟಕ ರಾಜಾಧ್ಯಕ್ಷ ರಿಯಾಜ್ ಡಲಾಯತ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ೨೭೭ ಸ್ಥಳೀಯ ಸಂಸ್ಥೆಗಳು ಇದ್ದು, ಪಟ್ಟಣ ವೆಂಡಿಂಗ್ ಕಮಿಟಿಯಲ್ಲಿ ಚರ್ಚಿಸಿ ವ್ಯಾಪಾರಸ್ಥರ ತೆರವು ಹಾಗೂ ಸ್ಥಳಾಂತರ ಬಗ್ಗೆ ಕ್ರಮ ಕೈಗೊಳ್ಳಬೇಕು ಆದರೇ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅದನ್ನು ಉಲ್ಲಂಘನೆ ಮಾಡಲಾಗುತ್ತುದೆ ಎಂದು ಆರೋಪಿಸಿದರು.

ವರ್ಷಕೊಮ್ಮೆ ಬೀದಿ ಬದಿ ವ್ಯಾಪಾರಸ್ಥರ ಸರ್ವೆ ಮಾಡಬೇಕು.ಆದರೆ ಸರ್ಕಾರ ಸಮರ್ಪಕವಾಗಿ ಮಾಡುತ್ತಿಲ್ಲ. ಹುಧಾ ಮಹಾನಗರ ಪಾಲಿಕೆಗೆ ಬೀದಿ ಬದಿ ವ್ಯಾಪಾರಸ್ಥರಿಂದ ವಾರ್ಷಿಕ ೨ ಕೋಟಿ ಆದಾಯ ತಲುಪುತಿದೆ.

ಆದರೇ ಅತಿಕ್ರಮ ಅತಿಕ್ರಮಣ ತೆರವು ಮಾಡುವಾಗ ಬೀದಿ ಬದಿ ವ್ಯಾಪಾರಸ್ಥರಿಗೆ ಪುನರ್ವಸತಿ ಕಲ್ಪಿಸುತ್ತಿಲ್ಲ. ವ್ಯಾಪಾರಿಗಳು ಬದುಕುವ ಹಕ್ಕನ್ನು ಸರ್ಕಾರ ಕಸಿದುಕೊಂಡಿದ್ದು ದೂರಿದರು.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *