ಧಾರವಾಡ:ಕರ್ನಾಟಕದಲ್ಲಿಯೂ ಗುಜರಾತ್ ಮಾದರಿ ಚುನಾವಣೆ ಮಾಡಲು ನಮ್ಮ ಆಗ್ರಹ ಇದ್ದೇ ಇದೆ. 8 ವರ್ಷಗಳಿಂದ ನಾನು ಪ್ರಧಾನಿಗಳ ಜೊತೆ ಕೆಲಸ ಮಾಡಿದ್ದೇನೆ, ಗುಜರಾತ್ ಮಾದರಿ ಚುನಾವಣೆ ಒಳ್ಳೆಯ ಸಂಗತಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಸಚಿವ ಜೋಶಿ, ಟಿಕೆಟ್ ನೀಡುವುದರ ಬಗ್ಗೆ ನಾನು ಈಗಲೇ ಹೇಳುವುದಿಲ್ಲ, ಯಾವಾಗ ಟಿಕೆಟ್ ಹಂಚುವ ಸಂದರ್ಭ ಬರುತ್ತದೆಯೋ ಆವಾಗ ನೋಡೋಣ. ನಡೆ, ನುಡಿ, ಬದ್ಧತೆ ಆಧಾರದಲ್ಲಿಯೇ ಪಕ್ಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ ಎಂದು ತಿಳಿಸಿದ್ದಾರೆ
ಹಿರಿಯರಿಗೆ ಕೋಕ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಿರಿಯರೆಲ್ಲರೂ ಕೆಟ್ಟವರು, ಹೊಸಬರು ಒಳ್ಳೆಯವರು ಎಂದರೆ ಹೇಗೆ? ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರ ಸೇವೆಯನ್ನು ನಾವು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯು ಸಲಾಂ ಆರತಿ ಬಿಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ, ಸಲಾಂ ಆರತಿ ಎಂಬುದನ್ನು ಬಿಟ್ಟಿದ್ದು ಸಂತೋಷ, ಕನ್ನಡ ಭಾಷೆಯಲ್ಲಿಯೂ ನಾವು ನಮಸ್ಕಾರ ಎಂದು ಹೇಳುತ್ತೇವೆ. ಸಂಸ್ಕೃತದಲ್ಲಿಯೂ ನಮಸ್ಕಾರ ಎಂದು ಹೇಳುತ್ತಾರೆ. ಹೀಗಾಗಿ ಗುಲಾಮಿ ಸಂಸ್ಕೃತಿ ಬಿಡಬೇಕು. ನಮ್ಮ ಸಂಸ್ಕೃತಿ ಇಟ್ಟುಕೊಂಡು ಮುಂದೆ ಹೋಗಬೇಕು ಎಂದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

