Breaking News

ಡಾ. ಶಿವರಾಜ್ ಕುಮಾರ್ ಅವರ ಅಭಿನಯದ ೧೨೫ ನೇ ಬಹುನಿರೀಕ್ಷಿತ ‘ವೇದ’ ಚಲನಚಿತ್ರದ ಪ್ರೀ ರಿಲೀಸ್ ಇವೆಂಟ್ ಹುಬ್ಬಳ್ಳಿಯಲ್ಲಿ

ಹುಬ್ಬಳ್ಳಿ: ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರ ಅಭಿನಯದ ೧೨೫ ನೇ ಬಹುನಿರೀಕ್ಷಿತ ‘ವೇದ’ ಚಲನಚಿತ್ರದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ ರಂದು ನವೀನ್ ಮೀಡಿಯಾ ಸೊಲ್ಯೂಷನ್ಸ್ ನ ಜಿ.ಜಿ. ದ್ಯಾವನಗೌಡ್ರ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ ೧೪ ರಂದು ಸಂಜೆ ೫ .೩೦ ಕ್ಕೆ ನಗರದ ರೈಲ್ವೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಆಕ್ಷನ್ ಪ್ರೀನ್ಸ್ ಧ್ರುವ ಸರ್ಜಾ, ಸಂಗೀತ ನಿರ್ದೇಶನ ಅರ್ಜುನ ಜನ್ಯ, ಹಿರಿಯ ನಟಿ ಉಮಾಶ್ರೀ, ಹರ್ಷಾ ಮಾಸ್ಟರ್ ಸೇರಿದಂತೆ ಸ್ಯಾಂಡಲ್ ವುಡ್ ಅನೇಕ ಗಣ್ಯರು ಭಾಗವಹಿಸಲಿದ್ದಾರೆಂದರು.

ಈಗಾಗಲೇ ಚಿತ್ರದ ಹಾಡುಗಳು ಸಾಕಷ್ಟು ಸದ್ದು ಮಾಡಿದ್ದು, ಬಹು ನಿರೀಕ್ಷೆ ಹುಟ್ಟು ಹಾಕಿದೆ. ಕುಟುಂಬ ಸಮೇತರಾಗಿ ನೋಡುವ ಚಿತ್ರ ಇದಾಗಿದೆ ಎಂದರು.

‘ವೇದ’ ಚಿತ್ರದ ಸಿನಿಮಾ ಪೂರ್ವ ಬಿಡುಗಡೆ ಸಮಾರಂಭಕ್ಕೆ ಹುಬ್ಬಳ್ಳಿ ವಲ್ಡ್ ಸ್ಕ್ವೇರ್, ಸಂತೋಷ ಲಾಡ್ ಫೌಂಡೇಶನ್, ‌ಮೆಜೆಸ್ಟಿಕ್ ಗ್ರೂಪ್, ಶ್ರೀ ದತ್ತ ಇನ್ಪ್ರಾಟಿಕ್ ಪ್ರೈವೇಟ್ ಲಿಮಿಟೆಡ್, ಹೊಟೇಲ್ ಪೃಥ್ವಿ ಪ್ಯಾರಡೈಸ್ ಸೇರಿದಂತೆ ಇತರರು ಪ್ರಾಯೋಜಕತ್ವ ನೀಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೈ ರಾಜವಂಶ ಅಭಿಮಾನಿಗಳ ಸಂಘದ ರಘು ವದ್ದಿ, ಲೆಗಸಿ ಇವೆಂಟ್ಸ್ ನ ಸಂಜಯ ವೆಂಕಟ್ ಉಪಸ್ಥಿತರಿದ್ದರು.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *