ಅಣ್ಣಿಗೇರಿ: ಇತ್ತೀಚೆಗೆ ಪಟ್ಟಣ ಹಾಗೂ ತಾಲ್ಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಬೆಳೆ ಹಾಗೂ ಮನೆಗಳಿಗೆ ಅಪಾರ ಹಾನಿಯಾಗಿದ್ದು, ಸರ್ಕಾರ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಪಕ್ಷಾತೀತ ರೈತ ಸಂಘದ ಅಧ್ಯಕ್ಷ ನಿಂಗಪ್ಪ ಬಡ್ಡೇಪ್ಪನವರ ಆರೋಪಿಸಿದರು.
ತಹಶೀಲ್ದಾರ್ ಅನೀಲ ಬಡಿಗೇರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ‘ಜಮೀನಿನ ಬದುವು, ಹೋಳಗಟ್ಟಿಗಳು ಕೂಡಾ ಮಳೆಯ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ. ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
‘ಈಗಾಗಲೇ ವಿತರಣೆಯಾಗಿರುವ ಪರಿಹಾರದ ಬಗ್ಗೆಯೂ ಮತ್ತೊಮ್ಮೆ ಪರಿಶೀಲನೆ ಮಾಡಿ ಹೆಚ್ಚಿನ ಪರಿಹಾರ ವಿತರಿಸಬೇಕು’ ಎಂದು ರೈತ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.
ಈಶ್ವರಪ್ಪ ಶ್ಯಾನಬೋಗರ, ಸಾತಪ್ಪ ಭೋವಿ, ವಿ.ವಿ. ಅಂಗಡಿ, ಸಿ.ಎ. ಹುರಕಡ್ಲಿ, ಎಂ.ಎಫ್. ಹೆಬಸೂರ, ಕುನ್ನಿಬಾಯಿ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

