ಬಳ್ಳಾರಿ: ತಾಲೂಕಿನ ಬಹುತೇಕ ವಿಕಲಚೇತನರು ಸೌಲಭ್ಯಗಳಿಂದ ವಂಚಿತರಾಗಿದ್ದು.ಇದಕ್ಕೆ ಸಂಬಂಧಿಸಿದ ಇಲಾಖಾಧಿಕಾರಿಗಳ ನಿಲ೯ಕ್ಷ್ಯ ಕಾರಣವಾಗಿದ್ದು ಅವರ ವಿರುದ್ಧ ಸಂಬಂಧಿಸಿದ ಉನ್ನತಾಧಿಕಾರಿಗಳಲ್ಲಿ ದೂರು ಸಲ್ಲಿಸಲಾಗುವುದೆಂದು ಕನ್ನಡ ಸೇನೆ ರಾಜ್ಯ ಉಪಾಧ್ಯಕ್ಷ ಎಲ್.ಎಸ್.ಬಷೀರ್ ಅಹಮ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಮಟ್ಟದ ಇಲಾಖಾಧಿಕಾರಿಗಳು ಪರಿಶೀಲಿಸಿ ಶೀಘ೯ವೇ ವಿಕಲ ಚೇತನರಿಗೆ ಸೌಲಭಂಯಗಳನ್ನು ಸಮಪ೯ಕವಾಗಿ ಒದಗಿಸಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.ಅವರು ತಮ್ಮಲ್ಲಿಗೆ ನೆರವು ಕೋರಿಬಂದಿದ್ದ ಕೂಡ್ಲಿಗಿ ತಾಲೂಕಿನ ನಿಂಬಳ ಗೇರೆ ಗ್ರಾಮದ ವಿಕಲ ಚೇತನ ಇಸ್ಮಾಯಿಲ್ ರನ್ನೇ ನಿದಶ೯ನವನ್ನಾಗಿಸಿ ಮಾತನಾಡಿ ತಾಲೂಕಿನ ಬಹುತೇಕ ಗ್ರಾಮೀಣ ಭಾಗದ ವಿಕಲಚೇತನರು ಸೌಲಭ್ಯಗಳಿಂದ ವಂಚಿತರಾಗಿದ್ದು ಜಿಲ್ಲಾಧಿಕಾರಿಗಳು ಈ ಸಂಬಂಧ ಹೆಚ್ಚು ಒತ್ತು ಕೊಟ್ಟು ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಜಾರಿಗೆ ತರಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಅವರು ಈ ಮೂಲಕ ಒತ್ತಾಯಿಸಿದ್ದಾರೆ. **ದೇವರು ಕೊಟ್ಟರೂ ಪೂಜಾರಿ ಕೊಡಲ್ಲ* _ ಸಕಾ೯ರ ವಿಕಲಚೇತನರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ ಯಾದರೂ ಸೌಲಭ್ಯಗಳು ತಮಗೆ ಎಟುಕುತಿಲ್ಲ ಎಂದು ತಾಲೂಕಿನ ಬಹುತೇಕ ವಿಕಲಚೇತನರ ಕೊರಗಾಗಿದೆ.ಕಾರಣ ಬ್ರಷ್ಠ ಅಧಿಕಾರಿಗಳು ಪ್ರಭಾವಿಗಳ ಅಸ್ತಕ್ಷೇಪ ಕಾರಣವಾಗಿದೆ ಎಂದು ನೊಂದ ವಿಕಲ ಚೇತನ ಇಸ್ಮಾಯಿಲ್ ಆಕ್ರೋಶ ವೆಕ್ತಪಡಿಸಿದ್ದಾನೆ.ತಾನು ಬೈಸಿಕಲ್ ಗಾಗಿ ಕಳೆದೆರೆಡು ವಷ೯ಗಳಿಂದ ಅಲೆದಾಡುತ್ತಿದ್ದು ಇಲಾಖಾಧಿಕಾರಿಗಳು ಸಮಪ೯ಕವಾಗಿ ಸ್ಪಂಧಿಸುತ್ತಿಲ್ಲ ಎಂದು ಇಸ್ಮಾಯಿಲ್ ದೂರಿದ್ದಾರೆ. ಬ್ರಷ್ಠ ಅಧಿಕಾರಿಗಳಿಂದಾಗಿ ಬಹುತೇಕ ವಿಕಲಚೇತನರಿಗೆ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಇಸ್ಮಾಯಿಲ್ ದೂರಿದ್ದಾರೆ.ತಾಲೂಕಿನ ಬಹುಪಾಲು ವಿಕಲಚೇತನರು ಪರದಾಡುತ್ತಿದ್ದು ಕಾರಣ ಅಧಿಕಾರಿಯನ್ನ ಕೂಡಲೇ ಬೇರೆಡೆಗೆ ವಗಾ೯ಹಿಸಿ ಪ್ರಾಮಾಣಿಕ ಅಧಿಕಾರಿಯನ್ನ ನೇಮಿಸಬೇಕೆಂದು ಎಲ್.ಎಸ್.ಬಷೀರ್ ಅಹಮ್ಮದ್ ಒತ್ತಾಯಿಸಿದ್ದಾರೆ.ಶಾಸಕರು ಸಂಸದರು ವಿಕಲಚೇತನರ ಅಳಲನ್ನು ಆಲಿಸಿ ಶೀಘ೯ವೇ ಸೂಕ್ತ ಕ್ರಮಗಳನ್ನ ಕೈಗೊಳ್ಳೋ ಮೂಲಕ ಸ್ಪಂಧಿಸಬೇಕೆಂದು ಅವರು ಈ ಮೂಲಕ ಮನವಿ ಮಾಡಿದ್ದಾರೆ. **ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428.*
bigtvnews | Hubli Dharwad News | Kannada News | Karnataka News Hubli News | News In Hubli | Local news





