ಹಾವೇರಿ: ಬಿಜೆಪಿಯ ನೂತನ ಜಿಲ್ಲಾ ಕಾರ್ಯಾಲಯದ ಉದ್ಘಾಟನೆ ನಡೆಯಿತು. ಮುಂಜಾನೆ ಗೋ ಪೂಜೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ದಂಪತಿ ನೆರವೇರಿಸಿದರು.
ತದನಂತರ ನವಗ್ರಹ ಪೂಜೆ ಸಾಂಗವಾಗಿ ನೆರವೇರಿತು ಹಾಗೂ ಶಾಂತಿ ಹೋಮ ಮಾಡಲಾಯಿತು.
ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ವಿಧಾನ ಪರಿಷತ್ ಸದಸ್ಯರಾದ ಆರ್. ಶಂಕರ್, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಸುರೇಶಗೌಡ ಪಾಟೀಲ ಅವರು ಭವನದ ವಿವಿಧ ಕೊಠಡಿಗಳನ್ನು ಉದ್ಘಾಟಿಸಿದರು.
ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಮಾತನಾಡಿ, ‘ರಾಜ್ಯದ ವಿವಿದ ಜಿಲ್ಲೆಯ 10 ಕಾರ್ಯಾಲಯಗಳು ಉದ್ಘಾಟನೆಗೊಂಡಿವೆ. ರಾಷ್ಟ್ರೀಯ ಅಧ್ಯಕ್ಷ ಜಿ.ಪಿ. ನಡ್ಡಾ ಕೊಪ್ಪಳದಿಂದ ವರ್ಚುವಲ್ ಮೂಲಕ ರಾಜ್ಯದ ವಿವಿದ ಭವವಗಳನ್ನು ಉದ್ಘಾಟಿಸಿದ್ದಾರೆ. ಮುಂಬರುವ ದಿನಮಾನಗಳಲ್ಲಿ ಬಿಜೆಪಿ ಜಿಲ್ಲಾ ಭವನ ಕಾರ್ಯಕರ್ತರಿಗೆ ಶಕ್ತಿಕೇಂದ್ರವಾಗಿ ಮಾರ್ಪಾಡಾಗಲಿದೆ ಎಂದು ಹೇಳಿದರು.
ಎಸ್.ಟಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಓಲೇಕಾರ, ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೋಜರಾಜ ಕರೋದಿ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಪಾಲಾಕ್ಷಗೌಡ ಪಾಟೀಲ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಭಾರತಿ ಜಂಬಗಿ, ಜಿಲ್ಲಾ ಪ್ರಭಾರಿ ಎನ್.ಎಲ್ ಕಲ್ಲೇಶ ಇದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ ಹೊಸಳ್ಳಿ, ಸ್ವಾಗತಿಸಿದರು, ಕೃಷ್ಣಾ ಇಳಗೇರ ವಂದಿಸಿದರು, ರುದ್ರೇಶ ಚಿನ್ನಣ್ಣನವರ ಕಾರ್ಯಕ್ರಮ ನಿರೂಪಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

