Breaking News

2 ಬಾರಿ ಸಿಎಂ ಸ್ಥಾನದ ಅವಕಾಶ ಕೈತಪ್ಪಿದ್ದು, ಈ ಬಾರಿ ಅದೃಷ್ಟವಿದ್ದರೆ ಸಿಎಂ ಆಗಬಹುದು : ಡಾ : ಪರಮೇಶ್ವರ್‌

ಮಧುಗಿರಿ: ನಾನೊಬ್ಬ ವಿದ್ಯಾವಂತ ಕುಟುಂಬ ದಿಂದ ಬಂದವನು ಹಾಗೂ 30 ವರ್ಷಗಳಿಂದ ಜನಸೇವೆ ಯಲ್ಲಿದ್ದೇನೆ. 2 ಬಾರಿ ಸಿಎಂ ಸ್ಥಾನದ ಅವಕಾಶ ಕೈತಪ್ಪಿದ್ದು, ಈ ಬಾರಿ ಅದೃಷ್ಟವಿದ್ದರೆ ಸಿಎಂ ಆಗಬಹುದು. ಜಾತಿ ಆಧಾರದಲ್ಲಿ ಸಿಎಂ ಮಾಡುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ| ಪರಮೇಶ್ವರ್‌ ಹೇಳಿದರು.

ತಾಲೂಕಿನ ಪುರವರ ಹೋಬಳಿಯ ಶ್ರೀರಾಮಕೃಷ್ಣ ಆಶ್ರಮದಲ್ಲಿ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಅವರು, ಈ ಭಾಗದ ಜನ ನನ್ನ ರಾಜಕೀಯದಲ್ಲಿ ಜತೆ ಯಾಗಿದ್ದಾರೆ. ನನಗೆ ರಾಜಕೀಯವೆಂದರೆ ಜನಸೇವೆಯೇ ಹೊರತು ಕೇವಲ ಸಿಎಂ ಆಗುವುದಲ್ಲ. ನಾನು ಚಿಕ್ಕವನಾಗಿದ್ದಾಗ ನಮ್ಮ ಮನೆಗೆ ವಿನೋಬಾ ಭಾವೆ ಬಂದಿ ದ್ದರು. ತಂದೆ ಗಾಂಧೀಜಿಯವರನ್ನು 2 ಬಾರಿ ಭೇಟಿಯಾಗಿದ್ದರು ಎಂದರು.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *