ಹುಬ್ಬಳ್ಳಿ: ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡುವುದಿಲ್ಲ. ನಾನು ನಾಳೆ ರಾಜೀನಾಮೆ ನೀಡಿದರೇ ಬಿಜೆಪಿಗೆ ಲಾಭವಾಗುತ್ತದೆ ಎಂದು ಹೇಳುವ ಮೂಲಕ ಸಿಎಮ್ ಇಬ್ರಾಹಿಂ ಯೂಟರ್ನ್ ಹೊಡೆದಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡೋಲ್ಲ. ಈ ವೇಳೆ ರಾಜೀನಾಮೆ ಕೊಟ್ಟರೆ ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತದೆ. ಹೀಗಾಗಿ ಬಜೆಟ್ ಅಧಿವೇಶನದ ನಂತರ ರಾಜೀನಾಮೆ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಇಬ್ರಾಹಿಂ ಹೇಳಿದರು.
ಹೈಕಮಾಂಡ್ ನಿಂದ ನನಗೆ ಬುಲಾವ್ ಬಂದಿದ್ದು, ಹೈಕಮಾಂಡ್ ಜೊತೆ ಮಾತನಾಡಿ ಮತ್ತೇ ನಮ್ಮ ವರಿಷ್ಠರ ಜೊತೆ ಸಭೆ ಮಾಡಲಿದ್ದೇನೆ ನಂತರ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಕಾಂಗ್ರೆಸಿಗರು ಒಂದೆಡೆ ಬಯ್ಯೋದು, ಇನ್ನೊಂದೆಡೆ ಹೊಗಳೋದು ಮಾಡಿಸುತ್ತಿದ್ದಾರೆ. ಅಲ್ಲದೇ ಉಗ್ರಪ್ಪ ಅವರ ಕಡೆಯಿಂದಮಾಡಿ ಸುತ್ತ ಇದ್ದ ಅದರ ಭ್ರಷ್ಟಾಚಾರದ ಆರೋಪ ಮಾಡಿಸುತ್ತಿದ್ದಾರೆ ಎಂದು ಇಬ್ರಾಹಿಂ ದೂರಿದರು.
ವಕ್ಫ ಬೋರ್ಡನಲ್ಲಿ ಭ್ರಷ್ಟಾಚಾರ ಮಾಡಿರೋದಾಗಿ ಹೇಳುತ್ತಿದ್ದಾರೆ. ಅಧು ನಿಜವಾಗಿದ್ದರೇ ಈಗ ಬಿಜೆಪಿ ಸರ್ಕಾರವಿದ್ದು, ನನ್ನ ಮೇಲೆ ತನಿಖೆ ನಡೆಸಲಿ ಎಂದ ಅವರು ಮನೆ ಮುಂದೆ ಕಟ್ಟಿದ ಶ್ವಾನಗಳಿಂದ ಯಾಕೆ ಬೊಗಳಿಸುತ್ತಿದ್ದೀರಿ ಎಂದು ಕಿಡಿ ಕಾರಿದರು.
ಜಮೀರ್ ಅಹ್ಮದ್ ಹೇಳೋದು ಒಂಥರ, ಮನೆಗೆ ಬಂದಿದ್ರು, ಸಿದ್ದರಾಮಯ್ಯ ಕರೆ ಮಾಡಿದ್ರು ಎಂದು ಹೇಳೂವ ಅವರು ನಾವೇನು ಇಲ್ಲ ಎಂದ ಮೇಲೆ ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಬೇಕು. ಇಲ್ಲವೇ ಬೇಡ ಜಂಗಮರ ರೀತಿ ಹೊರಟು ಬಿಡುತ್ತೇವೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

