Breaking News

ಡಿ.20ರಂದು  ಬೃಹತ ರೈತ ಪ್ರತಿಭಟನೆ : ಮಾಜಿ ನವಲಗುಂದ  ಸಚಿವ ಕೆ .ಎನ್. ಗಡ್ಡಿ


ನವಲಗುಂದ :  ಡಿಸೆಂಬರ್ 20 ರಂದು ಮಂಗಳವಾರ ನಗರದ ರೈತ ಭವನದಿಂದ ಬೆಳಿಗ್ಗೆ 11 ಗಂಟೆಗೆ ಬೃಹತ ರೈತ ಪ್ರತಿಭಟನೆ ಹಮ್ಮಿಕೊಂಡಿದ್ದು , ಅಂದಾಜು ಐದು ಸಾವಿರ ರೈತರು ಹಾಗೂ ಜನಸಾಮಾನ್ಯರು ಭಾಗವಹಿಸಲಿದ್ದಾರೆ . ತಾಲೂಕಿನ ಹಾಗೂ ಸುತ್ತಲಿನ ಗ್ರಾಮಗಳಿಗೆ ಮನೆ ಮನೆ ಭೇಟಿ ಮಾಡಿ ಪ್ರತಿಭಟನೆ ಮಾಡಲು ಮನವಿ ಮಾಡಲಾಗಿದೆ ಎಂದು ಮಾಜಿ ನವಲಗುಂದ  ಸಚಿವ ಕೆ ಎನ್ ಗಡ್ಡಿ ಹೇಳಿದರು .

ಅತಿವೃಷ್ಠಿ ಹಾಗೂ ನೆರೆ ಹಾವಳಿಯಿಂದ ನವಲಗುಂದ ವಿಧಾನ ಸಭಾ ಕ್ಷೇತ್ರದ ರೈತರು ಹಾಗೂ ಜನಸಾಮಾನ್ಯರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ . ಕೃಷಿ ಕಾರ್ಯಗಳಿಗಾಗಿ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತ ಕುಲಕ್ಕೆ ರಾಜ್ಯ ಸರ್ಕಾರ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ ಎಂದು ಮಾಜಿ ನವಲಗುಂದ  ಸಚಿವ ಕೆ ಎನ್ ಗಡ್ಡಿ ಹರಿಹಾಯ್ದರು .

ಈ ಸಂದರ್ಭದಲ್ಲಿ ಅರುಣಕುಮಾರ ಮಜ್ಜಗಿ , ಶಿವ ರಾಯಪ್ಪ ಮಾದರ , ಬಸಪ್ಪ ಶಲವಡಿ , ಬಸವರಾಜ ಹಾಳಪ್ಪಣ್ಣವರ , ಶಿವಾನಂದ ಗೊರವರ , ಸಿರಾಜ್ ಧಾರವಾಡ , ಎಂ.ಬಿ.ಕೊಪ್ಪಳ ಇದ್ದರು .

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *