ಕೊಪ್ಪಳ: ಮುಂದಿನ ತಿಂಗಳು 8ರಂದು ಇಲ್ಲಿ ನಡೆಯಲಿರುವ ಪ್ರಸಿದ್ಧ ಗವಿಸಿದ್ದೇಶ್ವರ ಮಠದ ಮಹಾರಥೋತ್ಸವವನ್ನು ಈಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಉದ್ಘಾಟನೆ ಮಾಡುವುದು ಖಚಿತವಾಗಿದೆ.
ವಾಸುದೇವ್ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಶುಕ್ರವಾರ ಮಠವೇ ಈ ಕುರಿತು ಪ್ರಕಟಣೆ ನೀಡಿದೆ. ಜಗ್ಗಿ ವಾಸುದೇವ್ 8ರಂದು ಸಂಜೆ 5.30ಕ್ಕೆ ಮಹಾರಥೋತ್ಸವಕ್ಕೆ ಚಾಲನೆ ನೀಡುವರು. ನಂತರ ಕೈಲಾಸ ಮಂಟಪದಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಲಿದ್ದಾರೆ.
ಮೈಸೂರು ಮೂಲದ ಸದ್ಗುರು ಕೊಯಮತ್ತೂರಿನಲ್ಲಿ ಫೌಂಡೇಷನ್ ಸ್ಥಾಪಿಸಿ ಆಧ್ಯಾತ್ಮ, ಸಮಾಜ, ಶೈಕ್ಷಣಿಕ ಹಾಗೂ ಪರಿಸರ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ. ‘ಕಾವೇರಿಯ ಕೂಗು’ ಅಭಿಯಾನದ ಮೂಲಕ ಒಂದು ಕೋಟಿಗೂ ಅಧಿಕ ಸಸಿಗಳನ್ನು ಕಾವೇರಿ ನದಿ ಪಾತ್ರದಲ್ಲಿ ಬೆಳೆಸುವ ಮೂಲಕ ಜೀವನದಿ ಪುನರುಜ್ಜೀವನಗೊಳಿಸಿದ್ದಾರೆ.ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಮತ್ತಷ್ಟು ಜನ ಅತಿಥಿಗಳು ಬರುವ ಸಾಧ್ಯತೆಯಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

