ಮಂಡ್ಯ: ಮೈಸೂರಿನ ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ವತಿಯಿಂದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಐ.ಎ.ಎಸ್. ಅಧಿಕಾರಿಯಾಗಿ ಆಯ್ಕೆಯಾದ ಮಂಡ್ಯ ಮಿಮ್ಸ್ ನ ಯುವವೈದ್ಯ ಡಾ. ನಾಗಾರ್ಜುನಗೌಡ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಉತ್ತಮ ಸೇವಾ ಸಾಧನೆ ಮಾಡಿದ ವೈದ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್, ವಿಶ್ರಾಂತ ಐ.ಎಫ್.ಎಸ್. ಅಧಿಕಾರಿ ಎ.ಎಂ. ಅಣ್ಣಯ್ಯ, ಆಹಾರ ವಿಜ್ಞಾನಿ ಮಹದೇವಯ್ಯ, ಟ್ರಸ್ಟ್ ನ ಅಧ್ಯಕ್ಷರಾದ ಡಿ. ರವಿಕುಮಾರ್, ಪದಾಧಿಕಾರಿ ಶ್ರೀಮತಿ ಸುಮಿತ್ರಾ ಅವರು ಹಾಜರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





