Breaking News

ಸಿಸಿಬಿ ಮತ್ತು ಉಪನಗರ ಪೊಲೀಸರು ಭರ್ಜರಿ ಬೇಟೆ..


ಹುಬ್ಬಳ್ಳಿ:- ಧಾರವಾಡ ಜಿಲ್ಲಾ ಆಸ್ಪತ್ರೆಯ ಎದುರಿಗೆ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದ ಇಬ್ಬರು ಬುಕ್ಕಿಗಳನ್ನು ಬಂಧಿಸುವಲ್ಲಿ ಉಪನಗರ ಪೊಲೀಸ್ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ. ಪಾಕಿಸ್ತಾನದ ಕಾರಾಚಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್
ದೇಶಗಳ ನಡುವೆ ನಡೆಯುತ್ತಿರುವ 50 ಓವರುಗಳ ಮಾಚ್ ಮೇಲೆ ಟೀಮ್, ಪ್ಲೇಯರ್ಸ್, ಪಡೆಯುವ ವಿಕೇಟ್,
ಹೊಡೆಯುವ ರನ್, ಓವರ್ ಮೇಲೆ 100/- ರೂಪಾಯಿಗಳಿಗೆ 1,000/- ರೂಪಾಯಿ ಹಣ ಕೊಡುವುದಾಗಿ


ಹೇಳುತ್ತಾ, ಚೀಟಿಗಳ ಮೇಲೆ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತ ಪೋನ್ ಮುಖಾಂತರ ಕ್ರಿಕೇಟ್ ಬೆಟ್ಟಿಂಗ್ ಜೂಜಾಟ ನಡೆಸುತ್ತಿದ್ದರು. ಸೂಕ್ತ ಮಾಹಿತಿ ಮೇರೆಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಶ್ರೀ ಹೆಚ್.ಎಮ್.ಪಾಟೀಲ್ ಪೊಲೀಸ್
ಇನ್ಸ್‌ಪೆಕ್ಟರ್ ಸಿಸಿಬಿ ವಿಭಾಗ ಹು-ಧಾ ರವರು ಮತ್ತು ಸಿಬ್ಬಂದಿ ಗಳು ದಾಳಿ ನಡೆಸಿ, ೨೫೦೦೦ ನಗದು, ಒಂದು ಮೊಬೈಲ್ ವಶ ಪಡಿಸಿಕೊಂಡಿದ್ದಾರೆ. ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಮಾನ್ಯ ಪೊಲೀಸ್
ಆಯುಕ್ತರರು ಹು-ಧಾ ರವರು ಶ್ಲಾಘಿಸಿದ್ದಾರೆ.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *